alex Certify
ಕನ್ನಡ ದುನಿಯಾ       Mobile App
       

Kannada Duniya

ವೇದ ಪುರಾಣಗಳ ಈ ವೆಬ್ ಸೈಟ್ ಗೆ ಈಗ ಫುಲ್ ಡಿಮ್ಯಾಂಡ್

ಭಾರತೀಯ ವೇದ, ಪುರಾಣ, ಶಾಸ್ತ್ರಗಳನ್ನೊಳಗೊಂಡ 10 ವರ್ಷ ಹಳೆಯ ವೆಬ್ ಸೈಟ್ ಒಂದಕ್ಕೆ ದಿಢೀರನೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಇದನ್ನು ನೋಡಿ ಐಐಟಿ ಕಾನ್ಪುರದ ಬೋಧಕ ವರ್ಗದವರು ಅಚ್ಚರಿಪಡ್ತಿದ್ದಾರೆ.

ಗೀತಾ ಸೂಪರ್ ಸೈಟ್ ಹೆಸರಿನ ಈ ವೆಬ್ ಸೈಟ್ ನಲ್ಲಿ ಮೊದಲು ದಿನಕ್ಕೆ ಹೆಚ್ಚು ಅಂದ್ರೆ 500 ಮಂದಿ ನೋಂದಣಿ ಮಾಡುತ್ತಿದ್ರು. ಈಗ ಪ್ರತಿದಿನ ಕಡಿಮೆ ಅಂದ್ರೂ 24,000 ಹಿಟ್ಸ್ ಬರ್ತಿದೆ. ಭಾರತದ ಪ್ರಾಚೀನ ವೇದ ಶಾಸ್ತ್ರಗಳ ಕುರಿತಾದ ಸಂಸ್ಕೃತ ಪುಸ್ತಕಗಳನ್ನೆಲ್ಲ ಬೇರೆ ಬೇರೆ 11 ಭಾಷೆಗಳಿಗೆ ಅನುವಾದ ಮಾಡಲಾಗಿದೆ.

ಅವು ಈ ವೆಬ್ ಸೈಟ್ ನಲ್ಲಿ ಲಭ್ಯವಿವೆ. ಅಸ್ಸಾಮೀಸ್ ಮತ್ತು ಓರಿಯಾ ಭಾಷೆಯಲ್ಲಿ ಕೂಡ ವೇದಾಧ್ಯಯನ ಮಾಡಲು ಅವಕಾಶವಿದೆ. ಭಾರತದ ಸಂಸ್ಕೃತಿ, ಪುರಾಣ, ಸಂಪ್ರದಾಯ ಇವೆಲ್ಲವನ್ನು ಎಲ್ಲರೂ ತಿಳಿದುಕೊಳ್ಳುವಂತಾಗಬೇಕು ಅನ್ನೋ ಉದ್ದೇಶದಿಂದ ವೆಬ್ ಸೈಟ್ ಆರಂಭಿಸಲಾಗಿತ್ತು.

ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಇದಕ್ಕೆ ಓದುಗರಿರುವುದು ವಿಶೇಷ. ದಿಢೀರನೆ ಈ ವೆಬ್ ಸೈಟ್ ಜನಪ್ರಿಯವಾಗಲು ಕಾರಣ ವಾಟ್ಸಾಪ್ ಎನ್ನುತ್ತಾರೆ ಐಐಟಿ ಕಾನ್ಪುರದ ಪ್ರೊಫೆಸರ್ ಗಳು. ಅದೇನೇ ಆದ್ರೂ ಈ ಆಧುನಿಕ ಯುಗದಲ್ಲೂ ಜನರು ಶಾಸ್ತ್ರ ಪುರಾಣಗಳ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಸ್ವಾಗತಾರ್ಹ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...