alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿದ್ಯಾರ್ಥಿನಿ ಪಡೆಯಲಿರೋ ವೇತನ ಕೇಳಿದ್ರೆ ಬೆರಗಾಗ್ತೀರಿ…!

ಹೈದ್ರಾಬಾದ್ ಐಐಟಿಯಲ್ಲಿ ಪದವಿ ಪಡೆದಂತಾ ಸ್ನೇಹಾರೆಡ್ಡಿ ಗೂಗಲ್ ಇತಿಹಾಸದಲ್ಲೇ ದಾಖಲೆ ಮೊತ್ತದ ಪ್ಯಾಕೇಜ್ ಪಡೆದ ವಿದ್ಯಾರ್ಥಿನಿಯಾಗಿ ಆಯ್ಕೆಯಾಗಿದ್ದಾರೆ. ಗೂಗಲ್ ನಲ್ಲಿ ಕೆಲಸದ ಜೊತೆಗೆ ವಾರ್ಷಿಕ 1 ಕೋಟಿ 20 ಲಕ್ಷ ರೂಪಾಯಿ ಸಂಬಳ ಪಡೆಯಲಿದ್ದಾರೆ ಸ್ನೇಹಾರೆಡ್ಡಿ.

2008 ರಲ್ಲಿ ಹೈದ್ರಾಬಾದ್ ನಲ್ಲಿ ಗೂಗಲ್ ಸ್ಥಾಪನೆಯಾದಾಗಿನಿಂದ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯಲ್ಲಿ ನೀಡಲಾಗಿರುವ ಹೆಚ್ಚಿನ ವೇತನ ಅನ್ನೋ ದಾಖಲೆಗೆ ಸ್ನೇಹಾರೆಡ್ಡಿ ಭಾಜನರಾಗಿದ್ದಾರೆ.

ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯಲ್ಲಿ ಇದುವರೆಗೂ ನೀಡಲಾಗಿರುವ ಅಧಿಕ ಮೊತ್ತ 40 ಲಕ್ಷ ರೂಪಾಯಿಯಾಗಿತ್ತು. ಸರಾಸರಿ ಪ್ಯಾಕೇಜ್ 11 ಲಕ್ಷ 50 ಸಾವಿರ ಆಗಿತ್ತು. ಆದ್ರೆ ಸ್ನೇಹಾ ರೆಡ್ಡಿ ಗೂಗಲ್ ಇಂಟಲಿಜೆನ್ಸ್ ಪ್ರಾಜೆಕ್ಟ್ ನಲ್ಲಿ ಟಾಪರ್ ಆಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಪದಕ ಮತ್ತು ಎಕ್ಸಲೆನ್ಸ್ ಇನ್ ಅಕಾಡೆಮಿಕ್ ಮತ್ತು ಕೋ ಕೆರಿಕುಲರ್ ಆಕ್ಟಿವಿಟಿಯ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ.

ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರುವ ಸ್ನೇಹಾ ರೆಡ್ಡಿ ಇತ್ತೀಚೆಗೆ ಗೂಗಲ್ ನಡೆಸಿದ ಆನ್ಲೈನ್ ಟೆಸ್ಟ್ ನ ನಾಲ್ಕು ಹಂತಗಳಲ್ಲಿ ನಡೆದ ಪರೀಕ್ಷೆಯಲ್ಲಿ ಚಿನ್ನದ ಪದಕಗಳನ್ನ ಗೆದ್ದಿದ್ದಾರೆ. ಅಂತಿಮ ಹಂತದ ಪರೀಕ್ಷೆಗೆ ಆಕೆ ಅಮೆರಿಕಾಕ್ಕೆ ತೆರಳಬೇಕಿತ್ತು. ಆದ್ರೆ ಅದು ಸಾಧ್ಯವಾಗದ ಹಿನ್ನಲೆಯಲ್ಲಿ ಆನ್ಲೈನ್ ಮೂಲಕವೇ ಆಕೆಯ ಬುದ್ಧಿವಂತಿಕೆಯನ್ನ ಗಣನೆಗೆ ತೆಗೆದುಕೊಂಡು ಅಂತಿಮ ಹಂತದ ಪರೀಕ್ಷೆಯನ್ನ ನೀಡಲಾಯ್ತು. ಅದರಲ್ಲಿಯೂ ಸ್ನೇಹಾ ರೆಡ್ಡಿ ವಿಜೇತರಾದರು.

ಅಚ್ಚರಿ ಏನಂದ್ರೆ ಕಾಲೇಜಿನ ಟಾಪರ್ ಆಗಿದ್ದ ಆಕೆಯ ಬ್ಯಾಚ್ ಮೇಟ್ ಇಬ್ರಾಹಿಂ ದಲಾಲ್ ಗೂಗಲ್ ನ 35 ಲಕ್ಷದ ಪ್ಯಾಕೇಜ್ ಪಡೆದಿದ್ದಾರೆ. ಹೈದ್ರಾಬಾದ್ ನ ವಿಕರಾಬಾದ್ ನಲ್ಲಿ ನೆಲೆಸಿರುವ ಸ್ನೇಹಾರೆಡ್ಡಿ ತಂದೆ ಕೂಡ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸ್ನೇಹಾ ರೆಡ್ಡಿ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...