alex Certify
ಕನ್ನಡ ದುನಿಯಾ       Mobile App
       

Kannada Duniya

IIM ರೋಹ್ಟಕ್ ವಿದ್ಯಾರ್ಥಿಗಳಿಗೆ ಬಂಪರ್

ರೋಹ್ಟಕ್ ನ ಐಐಎಂ ಕಾಲೇಜಿನಲ್ಲಿ 2016-18ನೇ ಬ್ಯಾಚ್ ನ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗ ದೊರೆತಿದೆ. ಅಷ್ಟೇ ಅಲ್ಲ ಈ ವರ್ಷ ಅತ್ಯಧಿಕ ಸಂಬಳ ಪಡೆದವರಲ್ಲಿ ಶೇ.16ರಷ್ಟು ಹೆಚ್ಚಳವೂ ಆಗಿದೆ. ಓರ್ವ ವಿದ್ಯಾರ್ಥಿಗೆ ಅತಿ ಹೆಚ್ಚು ಅಂದ್ರೆ 30 ಲಕ್ಷ ಮಾಸಿಕ ವೇತನ ದೊರೆಯುತ್ತಿದೆ.

ಇನ್ನು ಉದ್ಯೋಗ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳ ಸರಾಸರಿ ವೇತನ ವಾರ್ಷಿಕ 26 ಲಕ್ಷ ರೂಪಾಯಿ. ಈ ಬಾರಿ ಕ್ಯಾಂಪಸ್ ಸೆಲೆಕ್ಷನ್ ಗಾಗಿ 40 ಹೊಸ ಕಂಪನಿಗಳು ಬಂದಿದ್ದವು. ಒಟ್ಟು 90 ಕಂಪನಿಗಳಿಂದ 139 ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ನೀಡಲಾಗಿತ್ತು.

ಯಸ್ ಬ್ಯಾಂಕ್, ಡಾಬರ್, ಅಮೆಜಾನ್, ಬಿಪಿಸಿಎಲ್, ಮಾರುತಿ ಸುಜುಕಿ, ಟಾಟಾ ಸ್ಟೀಲ್ ಮತ್ತು ಜೆಕೆ ಗ್ರೂಪ್ ಇವುಗಳಲ್ಲಿ ಪ್ರಮುಖವಾಗಿವೆ. ಜನರಲ್ ಮ್ಯಾನೇಜ್ಮೆಂಟ್, ಎನಲಿಟಿಕ್ಸ್, ಸ್ಟ್ರಾಟಜಿ & ಕನ್ಸಲ್ಟಿಂಗ್ ಹಾಗೂ ಆಪರೇಶನ್ಸ್ ವಿಭಾಗಗಳಿಗೆ ಹೆಚ್ಚಿನ ನೇಮಕಾತಿ ಮಾಡಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...