alex Certify
ಕನ್ನಡ ದುನಿಯಾ       Mobile App
       

Kannada Duniya

‘ಹಿಂದಿ’ ಹೇರಿಕೆ ವಿರುದ್ದ ಸಿಡಿದೆದ್ದ ಐಐಎಂ ವಿದ್ಯಾರ್ಥಿಗಳು

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹೊರಡಿಸಿರುವ ಸುತ್ತೋಲೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಪದವಿ ಪ್ರಮಾಣಪತ್ರವನ್ನು ಹಿಂದಿ ಭಾಷೆಯಲ್ಲೂ ನೀಡಲು ಐಐಎಂ ಯೋಜಿಸಿದ್ದು, ಇದನ್ನು ಹಲವು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಹೆಸರನ್ನು ಹಿಂದಿಯಲ್ಲೂ ಬರೆದು ಕಳುಹಿಸುವಂತೆ ಸೂಚಿಸಲಾಗಿದ್ದು, ಇದು ಹಿಂದಿ ಹೇರಿಕೆಯ ಹುನ್ನಾರವೆಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಸೇರ್ಪಡೆಗೊಳ್ಳಲು ಅಥವಾ ಹೊರ ದೇಶಗಳಲ್ಲಿ ಉದ್ಯೋಗ ಮಾಡಲು ಹೋದರೆ ಅಲ್ಲಿ ಯಾರು ಹಿಂದಿ ಪದವಿ ಪ್ರಮಾಣ ಪತ್ರವನ್ನು ಅರ್ಥ ಮಾಡಿಕೊಳ್ಳುತ್ತಾರೆಂದು ಪ್ರಶ್ನಿಸಿದ್ದಾರೆ.

ಹಿಂದಿಯೇನೂ ರಾಷ್ಟ್ರ ಭಾಷೆಯಲ್ಲ. ಹಾಗೊಂದು ವೇಳೆ ಎರಡು ಭಾಷೆಗಳಲ್ಲಿ ಪ್ರಮಾಣ ಪತ್ರ ವಿತರಿಸಬೇಕೆಂದಿದ್ದರೆ ಇಂಗ್ಲೀಷ್ ಜೊತೆ ನಮ್ಮ ನಮ್ಮ ಮಾತೃ ಭಾಷೆಗಳಲ್ಲಿ ನೀಡುವಂತೆ ಆಗ್ರಹಿಸಿದ್ದಾರೆ. ಐಐಎಂ ನ ಸುತ್ತೋಲೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇದಕ್ಕೆ ಸ್ಪಷ್ಟನೆ ನೀಡಿರುವ ಐಐಎಂ ನಿರ್ದೇಶಕ ರಘುರಾಮ್, ಇದು ಪ್ರಸ್ತಾವನೆಯಷ್ಟೇ. ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...