alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ದುಲ್ ಕಲಾಂ ಮಾರ್ಗದಲ್ಲಿ ರಾಮ್ನಾಥ್ ಕೋವಿಂದ್

ರಾಷ್ಟ್ರಪತಿ ಭವನದಲ್ಲಿ ಈ ಬಾರಿ ಕೂಡ ಇಫ್ತಾರ್ ಕೂಟ ನಡೆಯುವುದಿಲ್ಲ. ರಾಷ್ಟ್ರಪತಿ ಭವನದಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳಿನಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಸಂಪ್ರದಾಯವಿದೆ. ಆದ್ರೆ 2002-2007 ಇದಕ್ಕೆ ಅಪವಾದ. ರಾಷ್ಟ್ರಪತಿಯಾಗಿದ್ದ ದಿವಂಗತ ಎಪಿಜೆ ಅಬ್ದುಲ್ ಕಲಾಂ ತಮ್ಮ ಅಧಿಕಾರಾವಧಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿರಲಿಲ್ಲ. ಈಗ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಕೂಡ ಇದೇ ಮಾರ್ಗ ತುಳಿದಿದ್ದಾರೆ. 2018ರಲ್ಲಿ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ನಡೆಯುವುದಿಲ್ಲ.

ರಾಷ್ಟ್ರಪತಿ ಭವನ ಧರ್ಮನಿರಪೇಕ್ಷವಾಗಿದೆ. ಹಾಗಾಗಿ ರಾಷ್ಟ್ರಪತಿ ಭವನವನ್ನು ಧರ್ಮದಿಂದ ಹೊರಗಿಡಲಾಗಿದೆ. ಜನರ ತೆರಿಗೆಯನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಖರ್ಚು ಮಾಡುವುದಿಲ್ಲವೆಂದು ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ಅಶೋಕ್ ಮಲ್ಲಿಕ್ ಹೇಳಿದ್ದಾರೆ.

ಅಬ್ದುಲ್ ಕಲಾಂ ಮೊದಲ ಬಾರಿ ಇಫ್ತಾರ್ ಕೂಟದ ಸಂಪ್ರದಾಯಕ್ಕೆ ತೆರೆ ಎಳೆದಿದ್ದರು. ಕೂಟಕ್ಕೆ ಬಳಸುವ ಹಣವನ್ನು ಬಡವರಿಗೆ ನೀಡಿದ್ದರು. ರಂಜಾನ್ ವೇಳೆ ಬಡವರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಕಲಾಂ ಮಾದರಿ ಕೆಲಸ ಮಾಡಿದ್ದರು. ಇದಾದ ನಂತ್ರ ಬಂದ ಪ್ರತಿಭಾ ಪಾಟೀಲ್ ಮತ್ತೆ ಇಫ್ತಾರ್ ಕೂಟ ಏರ್ಪಡಿಸಿದ್ದರು. 2008 ರಲ್ಲಿ ಮಾತ್ರ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಇಫ್ತಾರ್ ಕೂಟ ನಡೆದಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...