alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಲ್ಲಿ ಈ ಸಮಸ್ಯೆಯಾದರೆ ಸಚಿವರೂ ಹೆಲ್ಪ್ ಲೆಸ್

rail 123 mn

ರೈಲಿನಲ್ಲಿ ಪ್ರಯಾಣಿಕರಿಗೆ ಏನೇ ಸಮಸ್ಯೆಯಾದ ಕೂಡಲೇ, ಟ್ವಿಟರ್ ಮೂಲಕ ತಿಳಿಸಿದಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ಆ ಕ್ಷಣಕ್ಕೆ ಸ್ಪಂದಿಸಿ, ಕಷ್ಟದಲ್ಲಿರುವವರಿಗೆ ನೆರವಾಗುತ್ತಾರೆ. ಹೀಗೆ ಹಲವರಿಗೆ ಅವರು, ತಕ್ಷಣಕ್ಕೆ ಸ್ಪಂದಿಸಿರುವ ಬಗ್ಗೆ ಕೇಳಿರುತ್ತೀರಿ.

ಇದೊಂದು ವಿಷಯದಲ್ಲಿ ಮಾತ್ರ ಸಚಿವರೂ ಏನೂ ಮಾಡಲು ಸಾಧ್ಯವಿಲ್ಲ. ರೈಲಿನಲ್ಲಿ ದೂರದ ಪ್ರಯಾಣ ಕೈಗೊಂಡ ಸಂದರ್ಭದಲ್ಲಿ ನೀವು ಹಣ ಖಾಲಿ ಮಾಡಿಕೊಂಡರೆ ಎಟಿಎಂ ಕಾರ್ಡ್ ಇದ್ದರೂ ಪ್ರಯೋಜನವಾಗುವುದಿಲ್ಲ. ಎಟಿಎಂಗಳಲ್ಲಿ ಹಣ ಪಡೆದುಕೊಳ್ಳಲು ಕೂಡ ನಿಮಗೆ ಸಾಧ್ಯವಾಗಲ್ಲ. ದೇಶದಲ್ಲಿರುವ ಸುಮಾರು 7000 ರೈಲು ನಿಲ್ದಾಣಗಳಲ್ಲಿ ಕೇವಲ 1787 ನಿಲ್ದಾಣಗಳಲ್ಲಿ ಮಾತ್ರ ಎಟಿಎಂ ಸೆಂಟರ್ ಗಳಿವೆ. ಇರುವ ನಿಲ್ದಾಣಗಳಿಗೆ ಹೋಲಿಸಿದರೆ, ಇದು ಕೇವಲ ಶೇ.18ರಷ್ಟು ಮಾತ್ರ.

ಪ್ರಧಾನಿ ಮೋದಿ ಬುಲೆಟ್ ಟ್ರೈನ್ ಸಂಚಾರಕ್ಕೆ ಪ್ರಯತ್ನ ನಡೆಸಿದ್ದಾರೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕ್ಯಾಶ್ ಲೆಸ್ ವ್ಯವಹಾರ ನಡೆಸುವ ಆರ್ಥಿಕ ವ್ಯವಸ್ಥೆ ಜಾರಿಗೆ ಮುಂದಾಗಿದ್ದಾರೆ. ಹೀಗಿದ್ದರೂ, ರೈಲು ನಿಲ್ದಾಣಗಳಲ್ಲಿ ಇನ್ನೂ ಎಟಿಎಂ ಇಲ್ಲ. ದೂರದ ಪ್ರಯಾಣದ ಸಂದರ್ಭದಲ್ಲಿ ಹಣ ಬೇಕಾದಲ್ಲಿ ಎಟಿಎಂ ಹುಡುಕಿ ಹೊರಗೆ ಹೋದರೆ, ರೈಲು ನಿಲ್ದಾಣದಿಂದ ಮುಂದೆ ಹೋಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...