alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕಾಗಿ ಬಿಜೆಪಿ ಸಂಸದರಿಗೆ ಕಾಡುತ್ತಿದೆಯಂತೆ ರಾಹುಲ್ ಅಪ್ಪುಗೆಯ ಭಯ

ನವದೆಹಲಿ: ರಾಹುಲ್‌ ಗಾಂಧಿ ನಮ್ಮನ್ನು ಆಲಂಗಿಸಿಕೊಂಡರೆ, ಮಾರನೇ ದಿನವೇ ಪತ್ನಿ ವಿಚ್ಛೇದನ ನೀಡುತ್ತಾಳೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಹೇಳಿದ್ದಾರೆ.

ಬಿಜೆಪಿ ಸಂಸದರಿಗೆ ಭಯ ಕಾಡುತ್ತಿದೆ. ನಾನು ಬಂದಾಗ ಅವರು 2 ಹೆಜ್ಜೆ ಹಿಂದೆ ಸರಿಯುತ್ತಾರೆ. ಅವರನ್ನು ಆಲಂಗಿಸಿಕೊಳ್ಳುತ್ತೇನೆ ಎಂದು ತಿಳಿದು ಅವರು ಹಿಂದೆ ಹೋಗುತ್ತಾರೆ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ನಮಗೆ ಅವರು ಆಲಂಗಿಸಿಕೊಳ್ಳುವ ಭಯ ಇದೆ. ಒಂದು ವೇಳೆ ಅವರು ಮದುವೆ ಆಗಿದ್ದಲ್ಲಿ, ಈ ಭಯ ಇರುತ್ತಿರಲಿಲ್ಲ. ಭಾರತದಲ್ಲಿ ಐಪಿಸಿ 377ನ್ನು ಇನ್ನೂ ಕೈಬಿಡಲಾಗಿಲ್ಲ. ಆ ಪ್ರಕಾರ ಸಲಿಂಗ ಪ್ರೀತಿ ಕಾನೂನು ಬಾಹಿರ. ಅವರು ಮದುವೆಯಾದರೆ, ನಾವು ಅವರನ್ನು ಆಲಂಗಿಸಿಕೊಳ್ಳುತ್ತೇವೆ. ಸಮಸ್ಯೆ ಇಲ್ಲ. ಆದರೆ ಈಗ ಅವರು ಮದುವೆ ಆಗಿಲ್ಲವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭೆಯಲ್ಲಿ ಕಳೆದ ವಾರ ನಡೆದ ಅವಿಶ್ವಾಸ ಗೊತ್ತುವಳಿ ಚರ್ಚೆ ಬಳಿಕ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಆಲಂಗಿಸಿಕೊಂಡಿದ್ದರು. ಈ ಬಗ್ಗೆ ಬಿಜೆಪಿ ನಾಯಕರ ಟೀಕೆ, ನಗೆಪಾಟಲಿಗೂ ಗುರಿಯಾಗಿದ್ದರು.

ಇದಕ್ಕೆ ರಾಹುಲ್‌ ಗಾಂಧಿ, ದ್ವೇಷ ಭಾವನೆ ಕಾಂಗ್ರೆಸ್ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಈ ರೀತಿ ಮಾಡಿದ್ದಾಗಿ ಸಮಜಾಯಿಷಿ ನೀಡಿದ್ದರು. ಅಲ್ಲದೆ, ಬಿಜೆಪಿ ಸಂಸದರು, ನನ್ನನ್ನು ಕಂಡು ಆಲಂಗಿಸುವ ಭಯದಲ್ಲಿ ಹಿಂದೆ ಸರಿಯುತ್ತಾರೆ ಎಂದೂ ಹೇಳಿಕೆ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...