alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆಗಾರನ ಸುಳಿವು ನೀಡಿದ ಕ್ಯಾಬ್ ಚಾಲಕ – ಸುಂದರಿಯ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿದ್ದ ಹಂತಕ

ಓಲಾ ಕ್ಯಾಬ್ ಚಾಲಕನೊಬ್ಬನ ಸಮಯಪ್ರಜ್ಞೆಯಿಂದ ಪೊಲೀಸರಿಗೆ ಕೊಲೆ ಪ್ರಕರಣವೊಂದರ ಸುಳಿವು ಸಿಕ್ಕಿದ್ದು, ಅ ಮೇರೆಗೆ ಹಂತಕ, ಹೈದರಾಬಾದ್ ಮೂಲದ ವಿದ್ಯಾರ್ಥಿ, 19 ವರ್ಷದ ಮುಜಾಯಿಲ್ ಸಯೀದ್‍ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ರೂಪದರ್ಶಿ ರಾಜಸ್ಥಾನ ಮೂಲದ ಮಾನ್ವಿ ದೀಕ್ಷಿತ್(20) ಕೊಲೆ ಪ್ರಕರಣ ಪತ್ತೆಯಾಗಿದೆ.

ಸಯೀದ್, ಅಂಧೇರಿ ವೆಸ್ಟ್ ನಲ್ಲಿರುವ ವಸತಿ ಪ್ರದೇಶದಿಂದ ಭಾನುವಾರ ಓಲಾ ಕ್ಯಾಬ್ ಬುಕ್ ಮಾಡಿದ್ದ. ಆದರೆ ಈ ಮಧ್ಯೆ ಸಯೀದ್ ಮೂರು ಬಾರಿ ಡೆಸ್ಟಿನೇಷನ್ ಬದಲಾಯಿಸಿದ್ದ. ಇದರಿಂದ ಕ್ಯಾಬ್ ಚಾಲಕನಿಗೆ ಸಯೀದ್ ಮೇಲೆ ಅನುಮಾನ ಬಂದಿತ್ತು.

ಕೊನೆಗೆ ಮಲಾಡ್‍ನಲ್ಲಿ ಇಳಿದ ಸಯೀದ್ ತನ್ನೊಂದಿಗೆ ತಂದಿದ್ದ ಅತಿ ಭಾರದ ಸೂಟ್‍ಕೇಸ್‍ ಅನ್ನು ರಸ್ತೆ ಬದಿಯಲ್ಲೇ ಬಿಟ್ಟು ಹೋಗಿದ್ದ. ಇದರಿಂದ ಕ್ಯಾಬ್ ಚಾಲಕನ ಅನುಮಾನ ಹೆಚ್ಚಾಗಿ ಆತ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದ. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಸಿಸಿ ಟಿವಿ ಕ್ಲಿಪ್ಪಿಂಗ್ ಇತ್ಯಾದಿ ಸುಳಿವಿನ ಮೇರೆಗೆ ಕೊಲೆಗಾರನನ್ನು ಬಂಧಿಸಿದ್ದಾರೆ.

ಸಯೀದ್ ಮುಂಬೈಗೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದು, ಅಲ್ಲಿ ಆತನಿಗೆ ಮಾನ್ವಿಯ ಪರಿಚಯವಾಗಿದೆ. ಭಾನುವಾರ ಇಬ್ಬರೂ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಜಗಳ ನಡೆದು ಸಯೀದ್ ಆಕೆಯನ್ನು ಕೊಲೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...