alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಇಲ್ಲದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ನವದೆಹಲಿ: ಆಧಾರ್ ಇಲ್ಲದವರ ಪರವಾಗಿ ಸುಪ್ರೀಂ ಕೋರ್ಟ್ ಧ್ವನಿ ಎತ್ತಿದ್ದು, ಆಧಾರ್ ಇಲ್ಲದ ವ್ಯಕ್ತಿ ಸರ್ಕಾರದ ಅಸ್ತಿತ್ವದಲ್ಲಿ ಇಲ್ಲವೆಂದು ಅರ್ಥವೇ ಎಂದು ಪ್ರಶ್ನಿಸಿದೆ.

ಆಧಾರ್ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಎಲ್ಲರಿಗೂ ಸೌಲಭ್ಯ ಕಲ್ಪಿಸಲು ಆಧಾರ್ ಅವಶ್ಯಕವಾಗಿ ಬೇಕಾಗಿದೆ ನಿಜ. ಆದರೆ, ನಿರಾಶ್ರಿತರು ಆಧಾರ್ ಕಾರ್ಡ್ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಚಳಿಗಾಲದ ಸಂದರ್ಭದಲ್ಲಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಅವರು ಆಧಾರ್ ನಂತಹ ಗುರುತಿನ ಚೀಟಿ ನೀಡಬೇಕು ಎಂದು ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು ಹೇಳಿದ್ದಾರೆ.

ಮನೆ ಇಲ್ಲದ ವ್ಯಕ್ತಿಯು ಆಧಾರ್ ಕಾರ್ಡ್ ಪಡೆಯುವುದಾದರೂ ಹೇಗೆ? ಹಾಗಾದ್ರೆ ಆಧಾರ್ ಕಾರ್ಡ್ ಇಲ್ಲದ ವ್ಯಕ್ತಿ ಸರ್ಕಾರದ ಪ್ರಕಾರ ಅಸ್ತಿತ್ವದಲ್ಲಿ ಇಲ್ಲವೆಂದು ಅರ್ಥವೇ ಎಂದು ಪ್ರಶ್ನಿಸಿದೆ. ಆಧಾರ್ ಕಾರ್ಡ್ ಅನ್ನು ಎಷ್ಟು ಮಂದಿಗೆ ನೀಡಲಾಗಿದೆ. ಇನ್ನು ಎಷ್ಟು ಬಾಕಿ ಇದೆ ಎಂದು ಕೋರ್ಟ್ ತಿಳಿಯಲು ಬಯಸಿದೆ.

ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ 90 ಕೋಟಿ ಜನರಿಗೆ ಮೊಬೈಲ್ ಫೋನ್, ಬ್ಯಾಂಕ್ ಖಾತೆಗಳು ಹಾಗೂ ಸಮಾಜ ಕಲ್ಯಾಣ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಜನವರಿ 17 ರಿಂದ ಆಧಾರ್ ಮಾನ್ಯತೆ ಕುರಿತಾದ ಅಂತಿಮ ವಿಚಾರಣೆಯನ್ನು ಆರಂಭಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...