alex Certify
ಕನ್ನಡ ದುನಿಯಾ       Mobile App
       

Kannada Duniya

”ರಸ್ತೆಯಲ್ಲಿ ನಮಾಜ್ ಸಾಧ್ಯವಾದ್ರೆ ಠಾಣೆಯಲ್ಲಿ ಜನ್ಮಾಷ್ಠಮಿ ಯಾಕಿಲ್ಲ?’’

yogi_17_08_2017

ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಕಾನೂನಿನಲ್ಲಿ ಎಲ್ಲರೂ ಸಮಾನರು ಎಂದಿದ್ದಾರೆ. ದೇವಾಲಯಗಳಲ್ಲಿ ಧ್ವನಿವರ್ಧಕ ಬಳಕೆ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯೋಗಿ, ಈದ್ ಸಂದರ್ಭದಲ್ಲಿ ರಸ್ತೆ ಮೇಲೆ ನಮಾಜ್ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದಾದ ಮೇಲೆ ಕನ್ವಾರ್ ಯಾತ್ರೆಯಲ್ಲಿ ಮೈಕ್, ಡಿಜೆ ನಿಲ್ಲಿಸುವುದು ಯಾವ ನ್ಯಾಯ. ಎಂದು ಪ್ರಶ್ನಿಸಿದ ಯೋಗಿ ನಾನು ಇದಕ್ಕೆ ಅವಕಾಶ ನೀಡಲಿಲ್ಲ ಎಂದಿದ್ದಾರೆ.

ಕನ್ವಾರ್ ಯಾತ್ರೆಯಲ್ಲಿ ಧ್ವನಿವರ್ಧಕ ಬಳಕೆ ಮಾಡಬಾರದು ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿದ ಯೋಗಿ, ನಿಯಮ, ಕಾನೂನು ಎಲ್ಲರಿಗೂ ಒಂದೆ. ಕನ್ವಾರ್ ಯಾತ್ರೆಯಲ್ಲೊಂದೇ ಅಲ್ಲ ಯಾವ ಧರ್ಮದವರೂ ಧ್ವನಿವರ್ಧಕ ಬಳಕೆ ಮಾಡಬಾರದು ಎಂದ್ರೆ ಅದು ನ್ಯಾಯ.

ರಸ್ತೆಯಲ್ಲಿ ನಮಾಜ್ ಮಾಡಬಹುದು. ಆದ್ರೆ ಕಾನೂನನ್ನು ಮೀರಬಾರದು. ನಾವು ಯದುವಂಶಿಗಳು ಎಂದುಕೊಂಡವರು ಪೊಲೀಸ್ ಠಾಣೆಯಲ್ಲಿ ಜನ್ಮಾಷ್ಠಮಿ ಆಚರಣೆಯನ್ನು ನಿಲ್ಲಿಸಿದ್ದರು. ಆದ್ರೆ ನಾನು ಪೊಲೀಸ್ ಠಾಣೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಜನ್ಮಾಷ್ಠಮಿ ಆಚರಿಸಲು ಅನುಮತಿ ನೀಡಿದೆ ಎಂದ್ರು. ರಾಮ ಹಾಗೂ ಕೃಷ್ಣನ ಪರಂಪರೆಯನ್ನು ಗೌರವಿಸುವ ಭಾರತ ನಮಗೆ ಬೇಕು. ಹಾಗಾಗಿ ಇತಿಹಾಸವನ್ನು ಪೂರ್ಣವಾಗಿ ವಿವರಿಸಬೇಕು ಎಂದು ಯೋಗಿ ಹೇಳಿದ್ರು.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...