alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾಮಿ ನಾರಾಯಣ ವಿಗ್ರಹಕ್ಕೆ ಆರ್.ಎಸ್.ಎಸ್ ಸಮವಸ್ತ್ರ

rss-7334ಗುಜರಾತಿನ ಸೂರತ್ ನಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿನ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಪ್ರತಿ ಪಕ್ಷ ಕಾಂಗ್ರೆಸ್ ಈ ಘಟನೆ ದುರದೃಷ್ಟಕರವೆಂದಿದೆ.

ಸ್ವಾಮಿ ನಾರಾಯಣ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರ ಹಾಕಿರುವುದರ ಜೊತೆಗೆ ಕೈಯಲ್ಲಿ ಭಾರತದ ಬಾವುಟ ಇಟ್ಟಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾಮಿ ವಿಶ್ವ ಪ್ರಕಾಶ್ ಜಿ, ಭಕ್ತರೊಬ್ಬರು ಇದನ್ನು ಕಾಣಿಕೆಯಾಗಿ ನೀಡಿದ್ದು, ಅದನ್ನು ಸ್ವಾಮಿಯ ವಿಗ್ರಹಕ್ಕೆ ತೊಡಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗುತ್ತದೆಂಬುದರ ಅರಿವಿರಲಿಲ್ಲವೆಂದಿದ್ದಾರೆ.

ಕಾಂಗ್ರೆಸ್ ನಾಯಕ ಶಂಕರ್ ಸಿನ್ಹ ವಘೇಲಾ ಮಾತನಾಡಿ, ದೇವರ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರ ಹಾಕುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಗುಜರಾತ್ ಬಿಜೆಪಿ ನಾಯಕ ವಿಜಯ್ ರೂಪಾನಿ, ಈ ಘಟನೆ ತಮಗೆ ಅಚ್ಚರಿಯನ್ನುಂಟು ಮಾಡಿದ್ದು, ಸಮವಸ್ತ್ರ ಹಾಕಿದ್ದನ್ನು ತಾವೂ ಒಪ್ಪುವುದಿಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...