alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿ ಮುಂದೆಯೇ ಮಾಲಿಯಿಂದ ಹಸ್ತಮೈಥುನ

ಪಂಜಾಬ್ ವಿಶ್ವವಿದ್ಯಾಲಯದ ತೋಟದಲ್ಲಿರುವ ಮಾಲಿಯೊಬ್ಬ ನಗ್ನವಾಗಿ ಮರದ ಹಿಂದೆ ಅವಿತು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿ ಪಂಜಾಬ್ ವಿಶ್ವವಿದ್ಯಾಲಯ ಲೈಂಗಿಕ ದೌರ್ಜನ್ಯ ನಿಯಂತ್ರಣ ಸಮಿತಿಗೆ ದೂರು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತನ್ನ ಸ್ನೇಹಿತರನ್ನು ಭೇಟಿ ಮಾಡಲೆಂದು ವಿಶ್ವವಿದ್ಯಾಲಯದ ಆವರಣದಲ್ಲಿರುವ ಬಟಾನಿಕಲ್ ಗಾರ್ಡನ್‌ಗೆ ಆಗಸ್ಟ್ 20ರ ಸಂಜೆ ಆಗಮಿಸಿದ್ದಾಳೆ. ಈ ವೇಳೆ ಯುವತಿಯನ್ನೇ ನೋಡುತ್ತಿದ್ದ ತೋಟದ ಮಾಲಿ ಮರದ ಹಿಂದೆ ನಿಂತು, ನಗ್ನವಾಗಿ ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದದ್ದನ್ನು ಗಮನಿಸಿ ಗಾಬರಿಗೊಂಡು ಸ್ಥಳದಿಂದ ಓಡಿ ಬಂದಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ ಗಾಬರಿಯಲ್ಲಿ ಓಡಿ ಬರುವಾಗ, ಮೊಬೈಲ್‌ನ್ನು ಮಾತ್ರ ಹಿಡಿದುಕೊಂಡು ಬಂದಿದ್ದು ಬ್ಯಾಗ್‌ನ್ನು ತೋಟದಲ್ಲಿ ಬಿಟ್ಟಿದ್ದಳು. ಬಳಿಕ ಕೆಲ ವಿದ್ಯಾರ್ಥಿಗಳ ಸಹಾಯದೊಂದಿಗೆ ಬ್ಯಾಗ್ ಪಡೆಯಲು ಹೋದಾಗ, ಅದರಲ್ಲಿದ್ದ 1500 ರೂಪಾಯಿ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಯುವತಿ ವಿವರಿಸಿದ್ದಾಳೆ.

ದೂರು ಪಡೆದ ಮರುದಿನ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪಾರ್ಕ್‌ನಲ್ಲಿರುವ 16 ತೋಟದ ಮಾಲಿಗಳನ್ನು ವಿಚಾರಣೆ ನಡೆಸಿದ್ದು, ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...