alex Certify
ಕನ್ನಡ ದುನಿಯಾ       Mobile App
       

Kannada Duniya

‘ಐಡಿಯಾ’ ಬಳಕೆದಾರರಿಗೊಂದು ಸುದ್ದಿ

Idea_Cellular_123

ನವದೆಹಲಿ: ಈಗಂತೂ ಮೊಬೈಲ್ ಬಳಕೆದಾರರ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಅದರಲ್ಲಿಯೂ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಕೇಳಬೇಕೆ?

ತಮಗೆ ಇಷ್ಟವಾದ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು ಸಹಜವಾಗಿದೆ. ಕೆಲವು ಆಪ್ ಗಳು ಉಚಿತವಾಗಿದ್ದರೆ, ಮತ್ತೆ ಕೆಲವನ್ನು ಹಣ ಪಾವತಿಸಿ ಪಡೆಯಬೇಕಿದೆ. ಪ್ಲೇ ಸ್ಟೋರ್ ನಲ್ಲಿ ಹಣ ಪಾವತಿಸಿ, ನಿಮಗೆ ಬೇಕಾದ ಆಪ್ ಖರೀದಿಸಲು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬೇಕೇ ಬೇಕು. ಈಗ ಐಡಿಯಾ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಬೇಕಿಲ್ಲ. ನೀವು ಪೇಯ್ಡ್ ವರ್ಷನ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡಲ್ಲಿ, ನಿಮ್ಮ ಮೊಬೈಲ್ ಬಿಲ್ ಜೊತೆಗೆ, ಆಪ್ ಬಿಲ್ ಸೇರಿಸಿ ಕೊಡಲಾಗುವುದು.

ಕ್ರೆಡಿಟ್ ಕಾರ್ಡ್ ಇಲ್ಲದೆಯೂ, ನೀವು ಆಪ್ ಪಡೆದುಕೊಳ್ಳಬಹುದು. ಬಿಲ್ ಜೊತೆಗೆ ಇದನ್ನು ಸೇರಿಸಿ ಕೊಡಲಾಗುತ್ತದೆ. ಇದು ಒಳ್ಳೆಯದೇ ಆದರೂ, ನೀವು ಡೌನ್ ಲೋಡ್ ಮಾಡಿಕೊಂಡ ಆಪ್ ಗೆ ಶೇ.15ರಷ್ಟು ಹೆಚ್ಚುವರಿ ದರ ವಿಧಿಸಲಾಗುವುದು ಎಂದು ಹೇಳಲಾಗಿದೆ.

ಅಂಡ್ರಾಯಿಡ್ ಬಳಕೆದಾರರಿಗೆ ಐಡಿಯಾ ಈ ಸೌಲಭ್ಯ ಒದಗಿಸಿದ್ದು, ಇಂತಹ ಪ್ರಯತ್ನ ಇದೇ ಮೊದಲು ಎನ್ನಲಾಗಿದೆ. ಹಿಂದೆ ಮೈಕ್ರೋಸಾಫ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡು, ವಿಂಡೋಸ್ ಫೋನ್ ಗಳಿಗೆ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು.

ದೇಶದಲ್ಲಿ ಹೆಚ್ಚಿನವರು ಕ್ರೆಡಿಟ್ ಕಾರ್ಡ್ ಹೊಂದಿಲ್ಲದ ಕಾರಣ, ಪ್ಲೇ ಸ್ಟೋರ್ ನಲ್ಲಿ ತಮಗೆ ಬೇಕಾದ ಆಪ್, ಡೌನ್ ಲೋಡ್ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಇದೀಗ ಐಡಿಯಾ ಕ್ರೆಡಿಟ್ ಕಾರ್ಡ್ ಇಲ್ಲದೆಯೂ ಪೇಯ್ಡ್ ವರ್ಷನ್ ಖರೀದಿಸಲು ಅವಕಾಶ ನೀಡಿದ್ದರೂ, ಶೇ.15 ರಷ್ಟು ಹೆಚ್ಚು ಹಣ ವಿಧಿಸಲು ಮುಂದಾಗಿರುವುದು ಹೆಚ್ಚಿನವರಲ್ಲಿ ನಿರಾಸೆ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...