alex Certify
ಕನ್ನಡ ದುನಿಯಾ       Mobile App
       

Kannada Duniya

51 ರೂಪಾಯಿಗೆ ಐಡಿಯಾ ನೀಡ್ತಿದೆ ವರ್ಷಪೂರ್ತಿ ಇಂಟರ್ನೆಟ್

idea

ರಿಲಾಯನ್ಸ್ ಜಿಯೋ ನಂತ್ರ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್ ಗಳನ್ನು ತರ್ತಾ ಇವೆ. ಇದ್ರಲ್ಲಿ ಐಡಿಯಾ ಕೂಡ ಹಿಂದೆ ಬಿದ್ದಿಲ್ಲ. ಕೇವಲ 51 ರೂಪಾಯಿಗೆ ವರ್ಷಪೂರ್ತಿ ಡೇಟಾ ಪ್ಲಾನ್ ನೀಡ್ತಾ ಇದೆ ಐಡಿಯಾ. ಆದ್ರೆ ಈ ಪ್ಲಾನ್ ಪಡೆಯಲು ಗ್ರಾಹಕರು ವಿಶೇಷ ರಿಚಾರ್ಜ್ ಮಾಡಬೇಕಾಗುತ್ತದೆ.

ಈ ಯೋಜನೆ ಪ್ರಕಾರ ಐಡಿಯಾ ಸಿಮ್ ಪಡೆದವರು ಮೊದಲು 1499 ರೂಪಾಯಿ ರಿಚಾರ್ಜ್ ಮಾಡಬೇಕು. ರಿಚಾರ್ಜ್ ಮಾಡ್ತಿದ್ದಂತೆ ಬಳಕೆದಾರರಿಗೆ 6 ಜಿಬಿ ಹಾಗೂ 4 ಜಿಬಿ ಡೇಟಾ ಸಿಗಲಿದೆ. ಇದು ಒಂದು ವರ್ಷದವರೆಗೆ ಬರಲಿದೆ. ಈ ರಿಚಾರ್ಜ್ ನಂತ್ರ ಬಳಕೆದಾರರು 51 ರೂಪಾಯಿಗೆ ಒಂದು ಜಿಬಿ ಡೇಟಾ ಪಡೆಯಲು ಅರ್ಹರಾಗ್ತಾರೆ. 51 ರೂಪಾಯಿಗೆ ಸಿಗುವ 1 ಜಿಬಿ ಡೇಟಾ ವೆಲಿಡಿಟಿ ಒಂದು ತಿಂಗಳಿರಲಿದೆ.

ಪ್ರತಿ ರಾಜ್ಯದಲ್ಲಿಯೂ ಇದ್ರ ಬೆಲೆ ಬೇರೆ ಬೇರೆ ಇದೆ. ಬೆಂಗಳೂರಿನಲ್ಲಿ 48 ಮತ್ತು 54 ರೂಪಾಯಿಗೆ 1 ಜಿಬಿ ಡೇಟಾ ಸಿಗಲಿದೆ. ತಮಿಳುನಾಡು, ಪಂಜಾಬ್, ಒರಿಸ್ಸಾ, ಮಹಾರಾಷ್ಟ್ರ ಮತ್ತು ಗೋವಾ, ಹರ್ಯಾಣ ರಾಜ್ಯಗಳಲ್ಲಿ 51 ರೂಪಾಯಿಗೆ ಲಭ್ಯವಿದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಗ್ರಾಹಕರು 52 ರೂಪಾಯಿ ನೀಡಬೇಕಾಗುತ್ತದೆ.

ನೆನಪಿರಲಿ ಇದು ಪ್ರಿಪೇಡ್ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಜೊತೆಗೆ 1499 ರಿಚಾರ್ಜ್ ಮಾಡಿದವರು ಮಾತ್ರ 51 ರೂಪಾಯಿ ರಿಚಾರ್ಜ್ ಆಫರ್ ಪಡೆಯಲು ಆರ್ಹರಾಗಿರ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...