alex Certify
ಕನ್ನಡ ದುನಿಯಾ       Mobile App
       

Kannada Duniya

3,200 ಕೋಟಿ ಸಾಲ ಪ್ರಕರಣ: ಚಂದಾ ಕೊಚ್ಚಾರ್ ವಿಚಾರಣೆ ಸಾಧ್ಯತೆ

ವಿಡಿಯೋಕಾನ್ ಕಂಪನಿಗೆ ಐಸಿಐಸಿಐ ನೀಡಿದ 3250 ಕೋಟಿ ರೂಪಾಯಿ ಸಾಲ ವ್ಯವಹಾರದ ಬಗ್ಗೆ ಸಿಬಿಐ ಎರಡು ದಿನಗಳ ಹಿಂದೆ ಬ್ಯಾಂಕಿನ ಕೆಲ ಅಧಿಕಾರಿಗಳ ವಿಚಾರಣೆ ನಡೆಸಿದೆ. ಈಗ ಸಿಬಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ವಿಚಾರಣೆ ನಡೆಸಲು ಮುಂದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕ ದಾಖಲಾತಿ ಪ್ರಕಾರ ಸಾಲಕ್ಕೆ ಮೇಲಧಿಕಾರಿಗಳಿಂದ ಒಪ್ಪಿಗೆ ಸಿಕ್ಕಿತ್ತು ಎಂಬ ವಿಷ್ಯ ಗೊತ್ತಾಗಿದೆ. ಚಂದಾ ಕೊಚ್ಚಾರ್ ಕುಟುಂಬ ಹಾಗೂ ವಿಡಿಯೋಕಾನ್ ಗ್ರೂಪ್ ಚೇರ್ಮೆನ್ ವೇಣುಗೋಪಾಲ್ ಧಾತ್ ಮಧ್ಯೆ ಸ್ವೀಟ್ ಡೀಲ್ ನಡೆದಿದೆ ಎನ್ನಲಾಗಿದೆ. ಚಂದಾ ಕೊಚ್ಚಾರ್ ಪತಿ ದೀಪಕ್ ವಿರುದ್ಧ ಸಿಬಿಐ ಈಗಾಗಲೇ ದೂರ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಶುರು ಮಾಡಿದೆ.

ಚಂದಾ ಕೊಚ್ಚಾರ್ ಪತಿ ಸ್ನೇಹಿತನ ಕಂಪನಿಗೆ ಸಾಲ ನೀಡಿದ್ದಾರೆ ಎಂಬ ಆರೋಪವಿದೆ. ಈ ವ್ಯವಹಾರಕ್ಕಾಗಿ ವಿಡಿಯೋಕಾನ್ ಕಂಪನಿ ಎಷ್ಟು ಲಂಚ ನೀಡಿದೆ ಎಂಬುದು ಇನ್ನೂ ಹೊರಬಂದಿಲ್ಲ. ಈ ಸಾಲದ ವ್ಯವಹಾರ ಗುಪ್ತವಾಗಿ ನಡೆದಿದೆ ಎನ್ನಲಾಗಿದೆ.

ಐಸಿಐಸಿಐ ಬ್ಯಾಂಕ್ ಹಾಗೂ ವಿಡಿಯೋಕಾನ್ ಗ್ರೂಪ್ ಇನ್ವೆಸ್ಟರ್ ಅರವಿಂದ್ ಗುಪ್ತಾ, ಐಸಿಐಸಿಐ ಬ್ಯಾಂಕ್ 4000 ಕೋಟಿ ಸಾಲ ನೀಡಿದೆ. ಇದಕ್ಕೆ ಪ್ರತಿಯಾಗಿ ವಿಡಿಯೋಕಾನ್ ನಿಂದ ಖಾಸಗಿ ಲಾಭ ಪಡೆದಿದೆ ಎಂದು ಆರೋಪಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...