alex Certify
ಕನ್ನಡ ದುನಿಯಾ       Mobile App
       

Kannada Duniya

9,999 ರೂಪಾಯಿಗೆ ಸಿಗುತ್ತೇ ಲ್ಯಾಪ್ ಟಾಪ್

iBall-CompBook-Excelanceಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಕಂಪನಿ ಐ ಬಾಲ್ ಟೆಕ್ನಾಲಜೀಸ್, ಹೊಸ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ್ದು, ಇದರ ಬೆಲೆ 9,999 ರೂಪಾಯಿಗಳಾಗಿವೆ. ಮೈಕ್ರೋಮ್ಯಾಕ್ಸ್ ಕಂಪನಿ ಈ ಹಿಂದೆ ಬಿಡುಗಡೆ ಮಾಡಿದ್ದ ಲ್ಯಾಪ್ ಟಾಪ್ ಗೆ 10,459 ರೂ. ನಿಗದಿಪಡಿಸಲಾಗಿದ್ದು, ಐ ಬಾಲ್ ನ ಹೊಸ ಲ್ಯಾಪ್ ಟಾಪ್ ಈಗ ಅತ್ಯಂತ ಕಡಿಮೆ ದರದ ಲ್ಯಾಪ್ ಟಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾಂಪ್ ಬುಕ್ ಎಂಬ ಹೆಸರಿನ ಈ ಲ್ಯಾಪ್ ಟಾಪ್ ಮೂರು ಶ್ರೇಣಿಗಳಲ್ಲಿ ಲಭ್ಯವಿದ್ದು, 11. 6 ಇಂಚಿನ Excelance ಗೆ 9,999 ರೂ., 14 ಇಂಚಿನ Exemplaire ಗೆ 13,999 ರೂ. ಹಾಗೂ ಬ್ಯುಸಿನೆಸ್ ಎಡಿಷನ್ ಗೆ  19,999 ರೂ. ಗಳನ್ನು ನಿಗದಿಪಡಿಸಲಾಗಿದೆ.

ವಿಂಡೋಸ್ 10 ಅಪರೇಟಿಂಗ್ ಸಿಸ್ಟಂ ಹೊಂದಿರುವ ಈ ಲ್ಯಾಪ್ ಟಾಪ್ ಗಳು ಇಂಟೆಲ್ ಕ್ವಾಡ್ ಕೋರ್ ಪ್ರೊಸೆಸರ್, 2 ಜಿಬಿ ರ್ಯಾಮ್, 32 ಜಿಬಿ ಇಂಟರ್ನೆಲ್ ಸ್ಟೋರೆಜ್ ಇದ್ದು, ಇದನ್ನು 64 ಜಿಬಿ ವರೆಗೆ ಹಿಗ್ಗಿಸಬಹುದಾಗಿದೆ. ಹೆಚ್.ಡಿ.ಎಂ.1 ಪೋರ್ಟ್, 2 ಯು.ಎಸ್.ಬಿ ಪೋರ್ಟ್ ಹಾಗೂ 3.5 ಎಂಎಂ ಹೆಡ್ ಫೋನ್ ಜಾಕ್ ಇದಕ್ಕಿದೆ. ವೈಫೈ ಹಾಗೂ ಬ್ಲೂ ಟೂತ್ ಸೌಲಭ್ಯವೂ ಈ ಲ್ಯಾಪ್ ಟಾಪ್ ಗಳಿಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...