alex Certify
ಕನ್ನಡ ದುನಿಯಾ       Mobile App
       

Kannada Duniya

ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಹತ್ಯೆ

hyder

ಹೈದರಾಬಾದ್: ಐ.ಎ.ಎಸ್. ಅಧಿಕಾರಿ ಬಂಧಿತರಾಗಿರುವ ಅಸಹಜ ಲೈಂಗಿಕ ಕ್ರಿಯೆ, ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಮಾರ್ಚ್ 17 ರಂದು ಯೂಸುಫ್ ಗಡದ ಸಾಯಿ ಕಲ್ಯಾಣ್ ಅಪಾರ್ಟ್ ಮೆಂಟ್ ನಲ್ಲಿ ನಾಗರಾಜ್ ಎಂಬುವವನನ್ನು ಕೊಲೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ತೆಲಂಗಾಣ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿರುವ ಐ.ಎ.ಎಸ್. ಅಧಿಕಾರಿ ಡಿ. ವೆಂಕಟೇಶ್ವರ ರಾವ್ ಹಾಗೂ ಅವರ ಪುತ್ರ ಸುಕೃತ್ ಬಂಧಿತರಾಗಿದ್ದಾರೆ.

ಕಾರ್ ಚಾಲಕ ನಾಗರಾಜ್ ಜೊತೆಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದ ಸುಕೃತ್ ಇದಕ್ಕೆ ಒಪ್ಪದಿದ್ದಾಗ, ಮಾರ್ಚ್ 17 ರಂದು ಕೊಲೆ ಮಾಡಿದ್ದ.

ನಾಗರಾಜ್ ಶವ ಸಾಗಿಸುವ ಪ್ರಯತ್ನ ವಿಫಲವಾಗಿ, ಸುಕೃತ್ ತಂದೆಯ ನೆರವು ಕೇಳಿದ್ದ ಎನ್ನಲಾಗಿದೆ. ತನಿಖೆ ನಡೆಸಿದ ಪೊಲೀಸರು ತಂದೆ ಹಾಗೂ ಪುತ್ರನನ್ನು ಬಂಧಿಸಿದ್ದಾರೆ.

ಆದರೆ, ಪೊಲೀಸರು ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ವೆಂಕಟೇಶ್ವರ ರಾವ್ ಆರೋಪಿಸಿದ್ದಾರೆ.

ಪ್ರಕರಣದಿಂದ ನಿಮ್ಮ ಹೆಸರು ತೆಗೆಯಲು ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದ ಪೊಲೀಸರು, ಹಣ ಕೊಡಲು ನಿರಾಕರಿಸಿದ್ದಕ್ಕೆ ತಮ್ಮ ಹೆಸರನ್ನು ಸೇರಿಸಿದ್ದಾರೆ ಎಂದು ದೂರಿದ್ದಾರೆ.

ತೆಲಂಗಾಣದಲ್ಲಿ ಐ.ಎ.ಎಸ್. ಅಧಿಕಾರಿಯ ಬಂಧನ ಮತ್ತು ಆತನ ಪುತ್ರನ ಅಸಹಜ ಲೈಂಗಿಕ ಕ್ರಿಯೆ, ಹತ್ಯೆ ಪ್ರಕರಣ ಭಾರೀ ಚರ್ಚೆಯಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...