alex Certify
ಕನ್ನಡ ದುನಿಯಾ       Mobile App
       

Kannada Duniya

ಕೇದಾರನಾಥದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಪತನ

ಭಾರತೀಯ ವಾಯುಸೇನೆಗೆ ಸೇರಿದ Mi-17 ಹೆಲಿಕಾಪ್ಟರ್ ಉತ್ತರಾಖಂಡ್ ನ ಕೇದಾರನಾಥ ದೇವಾಲಯದ ಬಳಿ ಪತನಗೊಂಡಿದೆ. ಸೇನೆಗೆ ಸೇರಿದ ಕೆಲವೊಂದು ಸಾಮಗ್ರಿಗಳನ್ನು ಹೊತ್ತು ತಂದಿದ್ದ ಹೆಲಿಕಾಪ್ಟರ್ ಇದು. ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದೆ.

ಕಬ್ಬಿಣದ ಗಿರ್ಡರ್ ಒಂದನ್ನು ಸ್ಪರ್ಷಿಸಿದ್ದರಿಂದ ಹೆಲಿಕಾಪ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹೆಲಿಕಾಪ್ಟರ್ 13,000 ಕೆಜಿ ಭಾರ ಹೊರುವ ಸಾಮರ್ಥ್ಯ ಹೊಂದಿದೆ.

36 ಶಸ್ತ್ರಸಜ್ಜಿತ ಯೋಧರನ್ನು ಅಥವಾ 4500 ಕೆಜಿ ಸಾಮಗ್ರಿಗಳನ್ನು ಇದು ಹೊತ್ತೊಯ್ಯಬಲ್ಲದು. ಕಳೆದ ಅಕ್ಟೋಬರ್ ನಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಎಂಬಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಇಬ್ಬರು ಪೈಲಟ್ ಗಳು ಸೇರಿದಂತೆ 7 ಯೋಧರು ಹುತಾತ್ಮರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...