alex Certify
ಕನ್ನಡ ದುನಿಯಾ       Mobile App
       

Kannada Duniya

ಹುತಾತ್ಮ ಪತಿಯ ಅಂತ್ಯಸಂಸ್ಕಾರಕ್ಕೆ ಹಸುಗೂಸಿನೊಂದಿಗೆ ಆಗಮಿಸಿದ ಪತ್ನಿ

ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಆಗುವ ನೋವನ್ನು ಶಬ್ಧಗಳಲ್ಲಿ ಹೇಳಿಕೊಳ್ಳೋದು ಅಸಾಧ್ಯ. ಆದ್ರೆ ಮಿಲಿಟರಿ ಅಧಿಕಾರಿಗಳ ಕುಟುಂಬದವರಿಗೆ ಈ ನೋವು ನಿರಂತರ. ಇತ್ತೀಚೆಗಷ್ಟೆ ಅಸ್ಸಾಂನಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ವಿಂಗ್ ಕಮಾಂಡರ್ ಡಿ.ವತ್ಸ್ ಹುತಾತ್ಮರಾಗಿದ್ದರು.

Major Kumud Dogra on her way to pay last tributes to her husband Wing Commander D Vats who lost his life in a…

Posted by Indian Defence on Wednesday, February 21, 2018

ಅವರ ಪತ್ನಿ ಮೇಜರ್ ಕುಮುದ್ ದೋಗ್ರಾ ಕೂಡ ಸೇನೆಯಲ್ಲಿ ಅಧಿಕಾರಿ. ಪತಿಯನ್ನು ಕಳೆದುಕೊಂಡ ದುಃಖದ ನಡುವೆಯೇ ಮೇಜರ್ ಕುಮುದ್ ಅವರಿಗೆ ಮಗು ಜನಿಸಿದೆ. ಆದ್ರೆ ಹೊಸ ಅತಿಥಿಯ ಆಗಮನದ ಖುಷಿ ಹಂಚಿಕೊಳ್ಳಲು ಪತಿಯೇ ಜೊತೆಗಿರಲಿಲ್ಲ.

ಪತಿಯ ಅಂತ್ಯಸಂಸ್ಕಾರಕ್ಕೆ ಸೇನಾ ಸಮವಸ್ತ್ರ ತೊಟ್ಟು, 5 ದಿನಗಳ ಹಸುಗೂಸನ್ನು ಮಡಿಲಲ್ಲಿ ಎತ್ತಿಕೊಂಡು ಮೇಜರ್ ಕುಮುದ್ ಆಗಮಿಸಿದ್ದರು. ದೇಶದ ಬಗ್ಗೆ ಮೇಜರ್ ಕುಮುದ್ ಅವರಿಗಿರುವ ಗೌರವಕ್ಕೆ ಇದೇ ಸಾಕ್ಷಿ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಸ್ಸಾಂನಲ್ಲಿ ಫೆಬ್ರವರಿ 15ರಂದು ಹಗುರ ವಿಮಾನ ಪತನಗೊಂಡಿತ್ತು. ವಿಂಗ್ ಕಮಾಂಡರ್ ಡಿ.ವತ್ಸ್ ಸೇರಿದಂತೆ ಇಬ್ಬರು ಹಿರಿಯ ಪೈಲಟ್ ಗಳು ದುರ್ಮರಣಕ್ಕೀಡಾಗಿದ್ದರು. ತಾಂತ್ರಿಕ ತೊಂದರೆಯಿಂದ ವಿಮಾನ ಪತನವಾಗಿದೆ ಅಂತಾ ಹೇಳಲಾಗ್ತಿದ್ದು, ತನಿಖೆಗೂ ಆದೇಶಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...