alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟರ್ ಮೂಲಕ ಬಿಜೆಪಿ ನಾಯಕರಿಗೆ ಪಂಚ್ ನೀಡಿದ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಈ ವಿಚಾರವನ್ನು ರಾಹುಲ್ ಗಾಂಧಿ ಸ್ವತಃ ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ರಾಹುಲ್ ವಿದೇಶಕ್ಕೆ ಹೋಗಿದ್ದಾರೆ.

ತಾಯಿ ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆ ಹಿನ್ನೆಲೆಯಲ್ಲಿ ನಾನು ಕೆಲ ದಿನ ಭಾರತದಿಂದ ಹೊರಗಿರಲಿದ್ದೇನೆ. ಸಾಮಾಜಿಕ ಜಾಲತಾಣದ ಬಿಜೆಪಿ ಟ್ರೋಲ್ ಸ್ನೇಹಿತರೇ ತುಂಬಾ ಕೆಲಸ ಮಾಡಬೇಡಿ. ನಾನು ಶೀಘ್ರದಲ್ಲಿಯೇ ಹಿಂತಿರುಗುತ್ತೇನೆ ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.

ಸೋನಿಯಾ ಗಾಂಧಿ ವೈದ್ಯಕೀಯ ಪರೀಕ್ಷೆಗಾಗಿ ಆಗಾಗ ವಿದೇಶಕ್ಕೆ ಹೋಗ್ತಿರುತ್ತಾರೆ. ಆದ್ರೆ ಸೋನಿಯಾರನ್ನು ಕಾಡ್ತಿರುವುದು ಯಾವ ಖಾಯಿಲೆ ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಕಾಂಗ್ರೆಸ್ ಮೂಲಗಳು ಯಾವುದೇ ಹೇಳಿಕೆ ನೀಡಿಲ್ಲ.

ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ. ರಾಹುಲ್ ಬಂದ ನಂತ್ರ ಕಾಂಗ್ರೆಸ್-ಜೆಡಿಎಸ್ ಸಭೆ ಸೇರಲಿದೆ ಎಂದು ಮೂಲಗಳು ಹೇಳಿವೆ.

ಆಗಾಗ ರಾಹುಲ್ ಗಾಂಧಿ ವಿದೇಶಕ್ಕೆ ಹೋಗ್ತಿರುತ್ತಾರೆ. ಇದು ಬಿಜೆಪಿಗೆ ಆಹಾರವಾಗ್ತಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ವಿದೇಶಿ ಪ್ರವಾಸ ಟ್ರೋಲ್ ಆಗ್ತಿರುತ್ತದೆ. ಇದೇ ಕಾರಣಕ್ಕೆ ಈ ಬಾರಿ ರಾಹುಲ್ ಮೊದಲೇ ಎಚ್ಚರಿಗೆ ನೀಡಿ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...