alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಾನವೀಯತೆ ಮರೆತ ಸಚಿವರ ವರ್ತನೆ

telangana-minister

ಅಪಘಾತದಲ್ಲಿ ಗಾಯಗೊಂಡು ನಡುರಸ್ತೆಯಲ್ಲೇ ನರಳುತ್ತಾ ಬಿದ್ದಿದ್ದ ಇಬ್ಬರು ಗಾಯಾಳುಗಳು ಹಾಗೂ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹ ನೋಡಿದರೂ ಸಹಾಯ ಮಾಡಲು ಮುಂದಾಗದೇ ಕಂಡೂ ಕಾಣದಂತೆ ಹೋದ ತೆಲಂಗಾಣ ಸಚಿವರೊಬ್ಬರ ವರ್ತನೆ ವೈರಲ್ ಆಗಿದೆ.

ಬುಡಕಟ್ಟು ಕಲ್ಯಾಣ ಸಚಿವ ಅಜ್ಮೀರಾ ಚಂದುಲಾಲ್ ಕನಿಷ್ಟ ಮಾನವೀಯತೆಯನ್ನೂ ತೋರದೇ ಇರೋದು ತೀವ್ರ ಟೀಕೆಗೆ ಗುರಿಯಾಗಿದೆ. ಭಾನುವಾರ ಮಧ್ಯಾಹ್ನ ಪಲಂಪೇಟ್ ಜಿಲ್ಲೆಯ ನಲ್ಲಕಲುವ ರಸ್ತೆಯಲ್ಲಿ ನಡೆದ ಘಟನೆ ಇದು. ತದುರಿ ಮಧುಸೂಧನ ಚೆರಿ ತನ್ನ ಸ್ನೇಹಿತರಾದ ಗೋಪಿ ಹಾಗೂ ಸತೀಶ್ ಜೊತೆ ಬೈಕ್ ಏರಿ ರಾಮಪ್ಪ ದೇವಾಲಯಕ್ಕೆ ಹೊರಟಿದ್ದ. ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದಿದೆ. 30 ವರ್ಷದ ಚೆರಿ ಸ್ಥಳದಲ್ಲೇ ಶವವಾದ್ರೆ, ಉಳಿದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ರು.

ಅಪಘಾತಕ್ಕೆ ಕಾರಣನಾಗಿದ್ದ ಟ್ರಕ್ ಚಾಲಕ ವಾಹನದ ಸಮೇತ ಪರಾರಿಯಾಗಿದ್ದ. ಅಪಘಾತ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಚೆರಿಯ ಮೃತದೇಹ ಹಾಗೂ ಗಾಯಗೊಂಡ ಉಳಿದಿಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಯಾವುದಾದ್ರೂ ವಾಹನವನ್ನು ಎದುರುನೋಡುತ್ತಿದ್ರು. ಅದೇ ಸಮಯಕ್ಕೆ ಸಚಿವ ಅಜ್ಮೀರಾ ಚಂದುಲಾಲ್ ಅವರ ಕಾರು ಅದೇ ಸ್ಥಳದಲ್ಲಿ ಹಾದು ಹೋಗಿದೆ.

ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಂತ್ರಿಗಳು ನಡುರಸ್ತೆಯಲ್ಲಿ ಬಿದ್ದಿದ್ದ ಶವ ಹಾಗೂ ಗಾಯಾಳುಗಳನ್ನು ಗಮನಿಸಿದ್ರೂ ಕಾರು ನಿಲ್ಲಿಸುವ ಸೌಜನ್ಯ ತೋರಿಲ್ಲ. ಮಾನವೀಯತೆಯನ್ನೂ ಮರೆತು ಅಲ್ಲಿಂದ ವೇಗವಾಗಿ ಹೊರಟು ಹೋಗಿದ್ದಾರೆ. ತಮ್ಮದೇ ಕ್ಷೇತ್ರದ ಜನ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಲು ಮುಂದಾಗದ ಸಚಿವರ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಚಿವ ಅಜ್ಮೀರಾ ಉಡಾಫೆ ಉತ್ತರ ನೀಡಿದ್ದಾರೆ. ಸಂಬಂಧಿಕರಿಂದ ಕರೆ ಬಂದಿತ್ತು, ನಾನು ಮೊಬೈಲ್ ನಲ್ಲಿ ಮಾತನಾಡ್ತಿದ್ದಾಗ ಕಾರು ಅಪಘಾತ ಸ್ಥಳ ದಾಟಿ ಬಂದುಬಿಟ್ಟಿತ್ತು, ತುಂಬಾ ಅರ್ಜೆಂಟಿನಲ್ಲಿದ್ದಿದ್ರಿಂದ ಕಾರು ನಿಲ್ಲಿಸಿ ಇಳಿಯಲಿಲ್ಲ ಅಂತಾ ಸಬೂಬು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...