alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಆರೋಗ್ಯದ ಮಾಹಿತಿ ಕೇಳಿದ ಸೋದರ ಸೊಸೆ

jaya-nieceತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿ ಬೇಕು ಅಂತಾ ಸೋದರ ಸೊಸೆ ದೀಪಾ ಜಯಕುಮಾರ್ ಆಗ್ರಹಿಸಿದ್ದಾರೆ. ನಾನು ಆಕೆಯ ರಕ್ತ ಸಂಬಂಧಿ ಹಾಗಾಗಿ ನನ್ನ ಅತ್ತೆಯ ಆರೋಗ್ಯ ಸ್ಥಿತಿ ಬಗ್ಗೆ ತಿಳಿದುಕೊಳ್ಳುವ ಹಕ್ಕು ನನಗಿದೆ ಅಂತಾ ದೀಪಾ ಹೇಳಿದ್ದಾರೆ.

ದೀಪಾ, ಜಯಲಲಿತಾರ ಸಹೋದರ ಜಯಕುಮಾರ್ ಅವರ ಪುತ್ರಿ. ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಯಾರನ್ನು ನೋಡಲು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ ಅಂತಾ ದೀಪಾ ಅಳಲು ತೋಡಿಕೊಂಡಿದ್ದಾರೆ. ನನ್ನ ಅತ್ತೆಯನ್ನು ನೋಡದಂತೆ ಯಾರೋ ನನ್ನನ್ನು ತಡೆಯುತ್ತಿದ್ದಾರೆ, ಸಂಕಷ್ಟದ ಈ ಸಮಯದಲ್ಲಿ ಆಕೆಯ ಕೈಹಿಡಿದು ಸಮಾಧಾನಿಸಬೇಕು, ಕಾಳಜಿ ವಹಿಸಬೇಕು ಆದ್ರೆ ಅದಕ್ಕೆ ಅವಕಾಶವೇ ಸಿಗುತ್ತಿಲ್ಲ ಎಂದಿದ್ದಾರೆ.

2006ರಲ್ಲಿ ದೀಪಾ ಮತ್ತಾಕೆಯ ತಂದೆ ಜಯಕುಮಾರ್ ಜಯಲಲಿತಾರನ್ನು ಭೇಟಿಯಾಗಿದ್ದರಂತೆ. ಜಯಕುಮಾರ್ ಈಗ ಬದುಕಿಲ್ಲ. ಆ ನಂತರ ಮತ್ತೆ ತಮ್ಮ ಭೇಟಿ ಸಂಭವಿಸದೇ ಇದ್ದರೂ ಜಯಾರ ಬಗ್ಗೆ ತಮಗೆ ಅಪಾರ ಪ್ರೀತಿಯಿದೆ ಅಂತಾ ದೀಪಾ ಹೇಳಿಕೊಂಡಿದ್ದಾರೆ. ತಮ್ಮನ್ನು ಪೋಯಸ್ ಗಾರ್ಡನ್ ನ ಬಂಗಲೆಯಲ್ಲೇ ಇರಿಸಿಕೊಳ್ಳಬೇಕೆಂದು ಜಯಲಲಿತಾ ಅಂದುಕೊಂಡಿದ್ರು, ಆದ್ರೆ ಅದು ಸಾಧ್ಯವಾಗಿಲ್ಲ. ಈಗ ಆಸ್ಪತ್ರೆಯೊಳಕ್ಕೆ ನನ್ನನ್ನೇಕೆ ಬಿಡುತ್ತಿಲ್ಲ? ಜನರಿಗೆ ಕೂಡ ತಮ್ಮ ಮುಖ್ಯಮಂತ್ರಿಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಹಕ್ಕಿದೆ ಅಂತಾ ದೀಪಾ ಹೇಳಿದ್ದಾರೆ. ಗಂಟೆಗಟ್ಟಲೆ ಕಾದ್ರೂ ದೀಪಾಗೆ ಜಯಾರನ್ನು ಭೇಟಿಯಾಗಲು ಅವಕಾಶ ಕೊಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...