alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಣೆಯಾದ ಮಗನಿಗಾಗಿ ಮಿಡಿಯುತ್ತಿದೆ ಮಾತೃ ಹೃದಯ

nazeeb-ahmadಕಳೆದ ಶನಿವಾರದಿಂದ ನಾಪತ್ತೆಯಾಗಿರುವ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಇನ್ನೂ ಪತ್ತೆಯಾಗದಿರುವ ಮಧ್ಯೆ ಆತನ ತಾಯಿ ಫಾತೀಮಾ ನಫೀಸ್, ಮಗ ಸುರಕ್ಷಿತವಾಗಿ ಮರಳಿ ಬಂದರೆ ಸಾಕೆಂದು ಪರಿತಪಿಸುತ್ತಿದ್ದಾರೆ.

ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಗನ ಮರಳುವಿಕೆಗಾಗಿ ಕಾದು ಕುಳಿತಿರುವ ಫಾತೀಮಾ ನಫೀಸ್, ತಮ್ಮ ಮಗ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿಲ್ಲ. ಆತ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಿಂದ ಏಕಾಏಕಿ ಕಾಣೆಯಾಗಿರುವ ಕುರಿತು ಯಾರ ಕುರಿತೂ ದೂರುವುದಿಲ್ಲ. ಮಗ ಸುರಕ್ಷಿತವಾಗಿ ಮರಳಿದರೆ ತಮಗಷ್ಟೇ ಸಾಕು ಎಂದಿದ್ದಾರೆ.

ಕ್ಯಾಂಪಸ್ ನಿಂದ ಆತ ಕಾಣೆಯಾಗಿ ಇಷ್ಟು ದಿನಗಳಾದರೂ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ, ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ಆತ ಕಾಣೆಯಾದ ಬಳಿಕವೂ ತಮಗೆ ತಕ್ಷಣವೇ ಮಾಹಿತಿ ನೀಡಿರಲಿಲ್ಲವೆಂದಿರುವ ಅವರು, ಮಗ ಸುರಕ್ಷಿತವಾಗಿ ಮರಳಿ ಬಂದರೆ ಸಾಕು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...