alex Certify
ಕನ್ನಡ ದುನಿಯಾ       Mobile App
       

Kannada Duniya

ಟೀ ಮಾರುವವನ ಬಳಿ 400 ಕೋಟಿ..!

kishor

ಟೀ ಮಾರುವವನ ಬಳಿ ಎಷ್ಟು ಹಣ ಇರಲು ಸಾಧ್ಯ? ಅವರ ಬಗ್ಗೆ ನಿರ್ಲಕ್ಷ್ಯ ಬೇಡ ಸ್ವಾಮಿ. ಸೂರತ್ ನ ಟೀ ಮಾರುವ ವ್ಯಕ್ತಿ ಬಳಿ ಇದ್ದ ಹಣ ನೋಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ಆಗಿದ್ದಾರೆ.

ಸೂಕ್ತ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಿಶೋರ್ ಬಿಜಿಯಾವಾಲಾ ಎಂಬಾತನ ಬ್ಯಾಂಕ್ ಖಾತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆತನ ಬಳಿ 400 ಕೋಟಿ ಹಣ ಇರೋದನ್ನು ನೋಡಿದ ಅಧಿಕಾರಿಗಳು ದಂಗಾಗಿದ್ದಾರೆ. ಕಿಶೋರ್ ಬಿಜಿಯಾವಾಲಾನ 8 ಬ್ಯಾಂಕ್ ಲಾಕರ್ ಜಪ್ತಿ ಮಾಡಿದ್ದಾರೆ. ಈ ವೇಳೆ 13 ಕೆ.ಜಿ ಚಿನ್ನ, 180 ಕೆ.ಜಿ. ಬೆಳ್ಳಿ ಹಾಗೂ 1 ಕೋಟಿ ನಗದು ಸಿಕ್ಕಿದೆ. ಅದ್ರಲ್ಲಿ 90 ಲಕ್ಷ ಹೊಸ ನೋಟಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದ್ರ ಜೊತೆಗೆ 5, 10 ಹಾಗೂ 50 ರೂಪಾಯಿ ಮುಖ ಬೆಲೆಯ ನೋಟುಗಳು ಸಿಕ್ಕಿವೆ. 4.50 ಲಕ್ಷದ ಕಿಸಾನ್ ವಿಕಾಸ್ ಪತ್ರ ಕೂಡ ಕಿಶೋರ್ ಬಳಿ ಇದೆ. 30 ಬ್ಯಾಂಕ್ ಖಾತೆಗಳನ್ನು ಹೊಂದಿರುವ ಕಿಶೋರ್, ನೋಟು ನಿಷೇಧದ ನಂತ್ರ 50 ಲಕ್ಷ ರೂಪಾಯಿಯನ್ನು ಖಾತೆಗೆ ಜಮಾ ಮಾಡಿದ್ದಾನೆ. ಆ ನಂತ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಕಿಶೋರ್ ವಿಚಾರಣೆ ನಡೆಯುತ್ತಿದೆ. 31 ವರ್ಷಗಳ ಹಿಂದೆ ಕಿಶೋರ್ ಸೂರತ್ ಗೆ ಬಂದಿದ್ದ ಎನ್ನಲಾಗಿದೆ. ಬಂದ ಕೆಲವೇ ವರ್ಷಗಳಲ್ಲಿ ಆತ ಸ್ಥಳೀಯ ಪ್ರದೇಶದಲ್ಲಿ ಹೆಸರು ಗಳಿಸಿದ್ದ. ಟೀ ಮಾರುವ ಜೊತೆಗೆ ಬಡ್ಡಿ ವ್ಯವಹಾರ ಮಾಡ್ತಾ ಇದ್ದ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...