alex Certify
ಕನ್ನಡ ದುನಿಯಾ       Mobile App
       

Kannada Duniya

ಶಶಿಕಲಾ ಸಂಬಂಧಿಕರ ಸಂಪತ್ತು ಕಂಡು ದಂಗಾದ ಅಧಿಕಾರಿಗಳು

ಚೆನ್ನೈ: ತಮಿಳುನಾಡಿನಲ್ಲಿ ಕಳೆದ 3 ದಿನಗಳಿಂದ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮದುವೆ ದಿಬ್ಬಣದ ವಾಹನಗಳ ರೀತಿಯಲ್ಲಿ ವಧು –ವರರ ಹೆಸರಿನ ಸ್ಟಿಕರ್ ಅಂಟಿಸಿಕೊಂಡು ದಾಳಿ ಮಾಡಲಾಗಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಒಡೆತನದ(ಈಗ ವಿ.ಕೆ. ಶಶಿಕಲಾ ಅವರ ಒಡೆತನ) ಜಯಾ ಟಿ.ವಿ. ಕಚೇರಿ ಸೇರಿ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಶಶಿಕಲಾ, ಇಳವರಸಿ, ದಿನಕರನ್ ಅವರಿಗೆ ಸೇರಿದ ನೂರಾರು ಸ್ಥಳಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆ ಹಚ್ಚಲಾಗಿದೆ.

ಶಶಿಕಲಾ ಸಂಬಂಧಿಕರ ಮನೆಯಲ್ಲಿ 5 ಕೋಟಿ ರೂ.ಗೂ ಅಧಿಕ ನಗದು, 8 ಕೆ.ಜಿ.ಗೂ ಅಧಿಕ ಚಿನ್ನ ಜಪ್ತಿ ಮಾಡಲಾಗಿದೆ. ಅಕ್ರಮ ಸಂಪತ್ತಿಗೆ ಸೇರಿದ ಅಪಾರ ಪ್ರಮಾಣದ ದಾಖಲೆ ಪತ್ರ ವಶಕ್ಕೆ ಪಡೆಯಲಾಗಿದೆ.

20 ನಕಲಿ ಕಂಪನಿಗಳನ್ನು ಸ್ಥಾಪಿಸಿ ವಹಿವಾಟು ನಡೆಸಿರುವುದು ಗೊತ್ತಾಗಿದೆ. ಅಲ್ಲದೇ 140 ಕೋಟಿ ರೂ. ಮೌಲ್ಯದ 40 ಆಸ್ತಿ ದಾಖಲೆ ವಶಕ್ಕೆ ಪಡೆಯಲಾಗಿದೆ.

ಚೆನ್ನೈ, ತಂಜಾವೂರು, ಬೆಂಗಳೂರು, ಹೈದರಾಬಾದ್, ಕೊಯಮತ್ತೂರು ಮೊದಲಾದ ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಇನ್ನೂ ಅನೇಕ ಕಡೆ ಪರಿಶೀಲನೆ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...