alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಗೆದಷ್ಟು ಬರುತ್ತಿದೆ ಶಶಿಕಲಾ ಸಂಪತ್ತಿನ ರಾಶಿ

ಚೆನ್ನೈ: ಎ.ಐ.ಎ.ಡಿ.ಎಂ.ಕೆ. ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಐ.ಟಿ. ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಹಲವು ನಕಲಿ ಕಂಪನಿಗಳನ್ನು ಹೊಂದಿರುವುದು ಗೊತ್ತಾಗಿದೆ.

ತಮಿಳುನಾಡು, ಕರ್ನಾಟಕ ಮತ್ತು ಹೈದರಾಬಾದ್ ಸೇರಿ ನೂರಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಕಳೆದ 5 ದಿನಗಳಿಂದ ನಡೆಸಿದ ದಾಳಿಯಲ್ಲಿ ಶಾಕಿಂಗ್ ವಿವರ ಲಭ್ಯವಾಗಿದೆ.

ಶಶಿಕಲಾ ಆಪ್ತರು ಮತ್ತು ಸಂಬಂಧಿಕರಿಗೆ ಸೇರಿದ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ 7.14 ಕೋಟಿ ರೂ. ನಗದು, 5 ಕೆ.ಜಿ. ಚಿನ್ನಾಭರಣ, 1430 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆಯಾಗಿದೆ.

20 ಕ್ಕೂ ಅಧಿಕ ನಕಲಿ ಕಂಪನಿಗಳ ಹೆಸರಲ್ಲಿ 100 ಕ್ಕೂ ಅಧಿಕ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡಲಾಗಿದೆ. ಇದರೊಂದಿಗೆ ಮಹತ್ವದ ದಾಖಲೆ ಪತ್ರಗಳು ದೊರೆತಿದ್ದು, ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...