alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸಮೀಕ್ಷೆಯಲ್ಲಿ ಮೋದಿಯವರಿಗೆ ಸಿಕ್ಕಿದೆ ನಂ.1 ಸ್ಥಾನ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಮತ್ತೆ ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ವೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 48ರಷ್ಟು ಮಂದಿ ದೇಶವನ್ನು ಮುನ್ನಡೆಸಲು ಮೋದಿ ಯೋಗ್ಯ ವ್ಯಕ್ತಿ ಎಂದಿದ್ದಾರೆ. ರಾಜಕೀಯ ಚತುರ ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಈ ಸಮೀಕ್ಷೆ ನಡೆದಿದ್ದು, ಮತ್ತಷ್ಟು ವಿಶೇಷ.

ಇಂಡಿಯನ್ ಪಾಲಿಟಿಕಲ್ ಆಕ್ಷನ್ ಕಮಿಟಿ ಆನ್ಲೈನ್ ಸರ್ವೆ ನಡೆಸಿದೆ. ಈ ಸರ್ವೆಯಲ್ಲಿ 57 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಮೀಕ್ಷೆಯಲ್ಲಿ ಶೇಕಡಾ 48ರಷ್ಟು ಮಂದಿ, ನರೇಂದ್ರ ಮೋದಿ ದೇಶವನ್ನು ಸಮರ್ಥವಾಗಿ ಮುನ್ನೆಡಸಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸರ್ವೆ 55 ದಿನಗಳ ಕಾಲ ದೇಶದ 712 ಜಿಲ್ಲೆಗಳಲ್ಲಿ ನಡೆದಿದೆ. ಸರ್ವೆಯಲ್ಲಿ 923 ನಾಯಕರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಯಾರಿಗೆ ಮೊದಲ ಸ್ಥಾನ ನೀಡುತ್ತೀರಿ ಎಂಬ ಪ್ರಶ್ನೆಗೆ ಜನರು ಉತ್ತರ ನೀಡಿದ್ದಾರೆ.

ರಾಹುಲ್ ಗಾಂಧಿಗೆ ಶೇಕಡಾ 11ರಷ್ಟು ಮತ ನೀಡಿದ್ದು, ಎರಡನೇ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶೇಕಡಾ 9.3ರಷ್ಟು ಮತದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಖಿಲೇಶ್ ಯಾದವ್ ನಾಲ್ಕನೇ ಸ್ಥಾನದಲ್ಲಿದ್ರೆ ಮಮತಾ ಬ್ಯಾನರ್ಜಿ ಐದನೇ ಸ್ಥಾನದಲ್ಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...