alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಗಿಲ್ ಯೋಧನ ಪುತ್ರಿಗೆ ಅತ್ಯಾಚಾರದ ಬೆದರಿಕೆ

gur-mehar

ನವದೆಹಲಿ: ಎ.ಬಿ.ವಿ.ಪಿ. ವಿರುದ್ಧ ಹೇಳಿಕೆ ನೀಡಿದ್ದ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧನ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.

ದೆಹಲಿಯ ಕಾಲೇಜೊಂದರಲ್ಲಿ ಜೆ.ಎನ್.ಯು. ವಿದ್ಯಾರ್ಥಿ ಉಮರ್ ಖಾಲಿದ್ ಕರೆಸಿ, ಭಾಷಣ ಮಾಡಲು ಮುಂದಾಗಿದ್ದಕ್ಕೆ ಎ.ಬಿ.ವಿ.ಪಿ. ಮತ್ತು ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ನಡೆದಿತ್ತು.

ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರೆಂದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದ ಯೋಧ ಮನ್ ದೀಪ್ ಸಿಂಗ್ ಅವರ ಪುತ್ರಿ ಗುರ್ ಮೆಹರ್ ಕೌರ್ ವಿರೋಧ ವ್ಯಕ್ತಪಡಿಸಿದ್ದರು.

ಎ.ಬಿ.ವಿ.ಪಿ.ಗೆ ನಾನು ಹೆದರುವುದಿಲ್ಲ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿತ್ತು. ಇದಾದ ಬಳಿಕ, ಗುರ್ ಮೆಹರ್ ಕೌರ್ ಗೆ ಬೆದರಿಕೆ ಕರೆಗಳು ಬಂದಿವೆ. ಇದನ್ನು ಎನ್.ಡಿ.ಟಿ.ವಿ.ಯ ‘ವಿ ದಿ ಪೀಪಲ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಕೆ ಹೇಳಿಕೊಂಡಿದ್ದಾರೆ. ನನಗೆ ಬೆದರಿಕೆ ಕರೆ ಬರುತ್ತಿವೆ. ದೇಶದ್ರೋಹಿ ಎಂದೆಲ್ಲಾ ನನ್ನನ್ನು ನಿಂದಿಸುತ್ತಿದ್ದು, ಅತ್ಯಾಚಾರ ಎಸಗುವುದಾಗಿ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...