alex Certify
ಕನ್ನಡ ದುನಿಯಾ       Mobile App
       

Kannada Duniya

ರೆಸಾರ್ಟ್ ರಹಸ್ಯ ಬಿಚ್ಚಿಟ್ಟ AIADMK ಶಾಸಕ

tns-letr

ಚೆನ್ನೈ: ಮುಖ್ಯಮಂತ್ರಿ ಹುದ್ದೆಗಾಗಿ ಎ.ಐ.ಎ.ಡಿ.ಎಂ.ಕೆ. ನಾಯಕಿ ಶಶಿಕಲಾ ನಟರಾಜನ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಬಣಗಳ ಮೇಲಾಟ ನಡೆದಿದ್ದು, ರಾಜ್ಯಪಾಲರ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.

ಇದೇ ಸಂದರ್ಭದಲ್ಲಿ ಶಾಸಕರೊಬ್ಬರು ಮಾಡಿರುವ ಆರೋಪ ಎಲ್ಲರ ಗಮನ ಸೆಳೆದಿದೆ. ತಮ್ಮನ್ನು ಒತ್ತಾಯಪೂರ್ವಕವಾಗಿ ಕೂಡಿ ಹಾಕಿದ್ದರು ಎಂದು ಶಾಸಕ ಷಣ್ಮುಗನಾದನ್ ಆರೋಪಿಸಿದ್ದಾರೆ.

ರೆಸಾರ್ಟ್ ನಲ್ಲಿ ನಮ್ಮನ್ನು ಬಲವಂತವಾಗಿ ಕೂಡಿ ಹಾಕಲಾಗಿತ್ತು. ಖಾಲಿ ಪೇಪರ್ ಗೆ ಸಹಿ ಪಡೆದುಕೊಳ್ಳಲಾಗಿತ್ತು. ನನ್ನ ಇಚ್ಛೆಗೆ ವಿರುದ್ಧವಾಗಿ ರೆಸಾರ್ಟ್ ನಲ್ಲಿ ನಮಗೆ ಮುಕ್ತವಾಗಿಡಲು ಬಿಡದೇ ಅಕ್ರಮ ಬಂಧನದಲ್ಲಿಡಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸೇರಿದ್ದ ಶಾಸಕರನ್ನೆಲ್ಲಾ ಬಸ್ ನಲ್ಲಿ ಕರೆದುಕೊಂಡು ಹೋಗಿ ಕೂಡಿ ಹಾಕಲಾಗಿದೆ. ಅಕ್ರಮ ಬಂಧನದಲ್ಲಿರುವ ಶಾಸಕರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಷಣ್ಮುಗನಾದನ್ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ. ರೆಸಾರ್ಟ್ ನಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಅವರು ಹೇಳಿದ್ದು, ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...