alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರು ರಹಿತರಿಗೆ ‘ಸಿಹಿ’ ಸುದ್ದಿ ನೀಡಿದ ಪ್ರಧಾನಿ ಮೋದಿ

ದೇಶದ ಪ್ರತಿಯೊಂದು ಕುಟುಂಬವೂ ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಜುಜ್ವಾದಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, 2022 ರ ವೇಳೆಗೆ ಎಲ್ಲ ಕುಟುಂಬ ಸ್ವಂತ ಮನೆ ಹೊಂದಿರಬೇಕು ಎಂದು ತಮ್ಮ ಕನಸು ಬಿಚ್ಚಿಟ್ಟಿದ್ದಾರೆ.

ಪ್ರಧಾನಿಯಾಗಿದ್ದ ವೇಳೆ ರಾಜೀವ್‌ ಗಾಂಧಿಯವರು, ಸರಕಾರ 1 ರೂ. ಬಿಡುಗಡೆ ಮಾಡಿದರೆ, ಬಡವರಿಗೆ 15 ಪೈಸೆಯಷ್ಟೇ ತಲುಪುತ್ತದೆ ಎಂದು ಅಂದು ಹೇಳಿದ್ದರು. ಆದರೆ ಇಂದಿನ ಕೇಂದ್ರ ಸರಕಾರ ಬಿಡುಗಡೆ ಮಾಡಿದ 1 ರೂ. ನಲ್ಲಿ ನೂರು ಪೈಸೆಯೂ ಬಡವರನ್ನು ತಲುಪುತ್ತದೆ ಎಂದರು.

ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಸುಮಾರು 1 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಗುಜರಾತ್‌ ನನಗೆ ಅನೇಕ ವಿಚಾರಗಳನ್ನು ಕಲಿಸಿಕೊಟ್ಟಿದೆ. ಈ ಅನುಭವವನ್ನು ದೇಶದ ಎಲ್ಲ ನಾಗರಿಕರ ಅಭಿವೃದ್ಧಿಗಾಗಿ ಬಳಸಲು ಬದ್ಧವಾಗಿದ್ದೇನೆ. ಯೋಜನೆಯ ಮೂಲಕ ನಿರ್ಮಿಸುವ ಮನೆಗಳ ಗುಣಮಟ್ಟ, ಬಳಸುವ ಸಾಮಾಗ್ರಿ, ವಿನ್ಯಾಸ ಎಲ್ಲವೂ ಕುಟುಂಬವೇ ನಿರ್ಧಾರ ಮಾಡುವುದರಿಂದ ಗುಣಮಟ್ಟದ ಮನೆಗಳ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...