alex Certify
ಕನ್ನಡ ದುನಿಯಾ       Mobile App
       

Kannada Duniya

ದಪ್ಪಗಿದ್ದಾಕೆಯನ್ನು ನಡು ರಸ್ತೆಯಲ್ಲೇ ಕೆಳಗಿಳಿಸಿದ ಆಟೋ ಚಾಲಕ

auto reprentational imageಯುವತಿಯೊಬ್ಬಳು ದಪ್ಪಗಿದ್ದಾಳೆಂಬ ಕಾರಣಕ್ಕೆ ಆಟೋ ಚಾಲಕನೊಬ್ಬ ಆಕೆಯನ್ನು ರಸ್ತೆ ಮಧ್ಯದಲ್ಲೇ ಕೆಳಗಿಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಇದರಿಂದ ನೊಂದ ಯುವತಿ ಆತನ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿ ಪೊಲೀಸರ ಮೊರೆ ಹೋಗಿದ್ದಾಳೆ.

ಸಾಂತಾಕ್ರೂಜ್ ನಿವಾಸಿ ಆಸ್ಮಿ ಶಾ, ಜುಹುವಿನಲ್ಲಿರುವ ತಮ್ಮ ಕಛೇರಿಗೆ ಹೋಗಲು ಆಟೋ ಏರಿದ್ದರು. ಮಾರ್ಗ ಮಧ್ಯದಲ್ಲಿ ತಮ್ಮ ತಾಯಿಯವರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಿದ್ದ ಕಾರಣ ಆಟೋ ಚಾಲಕನಿಗೆ ಆಟೋ ನಿಲ್ಲಿಸಲು ಹೇಳಿದ್ದಾರೆ. ಆಗ ಆತ ಅವರೂ ನಿಮ್ಮಂತೆ ದಪ್ಪವಾಗಿದ್ದರೆ ತನ್ನ ಆಟೋದಲ್ಲಿ ಹತ್ತಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾನೆ. ಇದರಿಂದ ಶಾಕ್ ಆದ ಆಸ್ಮಿ ಶಾ, ಗೌರವಯುತವಾಗಿ ಮಾತನಾಡುವಂತೆ ಹೇಳಿದ್ದಾರೆ.

ಅದಕ್ಕಾತ ನಿಮ್ಮಂತ ದಪ್ಪಗಿರುವವರು ನನ್ನ ಆಟೋ ಏರಿದರೆ ಸ್ಪೀಡ್ ಆಗಿ ಹೋಗಲು ಸಾಧ್ಯವಿಲ್ಲವೆಂದು ಹೇಳಿದ್ದಾನೆ. ಜೊತೆಗೆ ಅವರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಆತನ ಆಟೋ ನಂಬರ್ ಅನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ ಆಸ್ಮಿ ಶಾ, ಟ್ರಾಫಿಕ್ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಆತನನ್ನು ಹಿಡಿದ ಟ್ರಾಫಿಕ್ ಪೊಲೀಸರು ಪ್ರಯಾಣಿಕರಿಗೆ ಹೇಳಿದ ಸ್ಥಳಕ್ಕೆ ಕರೆದೊಯ್ಯದ ಕಾರಣ ದಂಡ ವಿಧಿಸಿ ಬಿಟ್ಟು ಕಳುಹಿಸಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಆಸ್ಮಿ ಶಾ, ತಮ್ಮನ್ನು ಅವಮಾನಿಸಿದ ಆಟೋ ಚಾಲಕನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮತ್ತೊಮ್ಮೆ ದೂರು ನೀಡಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...