alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಊಟ

ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಪ್ರತಿ ವಿವಾಹದಲ್ಲೂ ಏನಾದ್ರೂ ಹೊಸತನ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಇನ್ನು ಚಿನ್ನಕ್ಕಂತೂ ಮದುವೆಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್. ವಧು ಮೈತುಂಬಾ ಬಂಗಾರದ ಆಭರಣ ಹೇರಿಕೊಳ್ಳೋದು ಕಾಮನ್.

ಆದ್ರೆ ಈಗ ತಿನ್ನೋ ಆಹಾರ ಕೂಡ ಚಿನ್ನವಾಗಿದೆ. ಹೈದ್ರಾಬಾದ್ ನಲ್ಲಿ ನಡೆದ ಆಡಂಬರದ ಮದುವೆಯಲ್ಲಿ ಅತಿಥಿಗಳಿಗೆಲ್ಲ ಚಿನ್ನದ ಅನ್ನವನ್ನೇ ಬಡಿಸಲಾಗಿದೆ. ಹಾಗಂತ ಚಿನ್ನದಿಂದ್ಲೇ ಮಾಡಿದ ಅನ್ನ ಅದು ಎಂದುಕೊಳ್ಬೇಡಿ, ಅನ್ನಕ್ಕೆ ಬಂಗಾರದ ಸ್ಪರ್ಷವಿತ್ತಷ್ಟೆ.

ಈ ಚಿನ್ನದ ಊಟದ ವಿಡಿಯೋ ಕೂಡ ವೈರಲ್ ಆಗಿದೆ. ಬಾಳೆ ಎಲೆ ಮೇಲೆ ಈ ಮೃಷ್ಟಾನ್ನವನ್ನು ಬಡಿಸಲಾಗಿದೆ. 24 ಕ್ಯಾರೆಟ್ ಚಿನ್ನದಿಂದ ಮಾಡಿದ ಎಲೆಯ ಮೇಲೆ ಬಿಸಿ ಬಿಸಿ ಅನ್ನವನ್ನು ಬಡಿಸಲಾಗಿದೆ. ಹೈದ್ರಾಬಾದ್ ನ ಕೇಟರರ್ ವಿ.ಸಾಯಿ ರಾಧಾಕೃಷ್ಣ ಈ ವಿನೂತನ ಪ್ರಯೋಗ ಮಾಡಿದ್ದಾರೆ. ಪ್ರತಿ ಎಲೆಗೆ 300 ರೂಪಾಯಿ ಖರ್ಚಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...