alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿರುವ ಮಗಳ ನೆರವಿಗಾಗಿ ಸುಷ್ಮಾ ಸ್ವರಾಜ್‍ ಮೊರೆ ಹೋದ ಮಹಿಳೆ

ಸೌದಿ ಅರೇಬಿಯಾದ ರಿಯಾದ್‍ ಗೆ ಕೆಲಸಕ್ಕೆಂದು ಹೋದ ಮಗಳು ಸಂಕಷ್ಟದಲ್ಲಿದ್ದಾಳೆ, ಆಕೆಯನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಹೈದರಾಬಾದ್ ಮಹಿಳೆಯೊಬ್ಬರು ಮೊರೆ ಇಟ್ಟಿದ್ದಾರೆ.

ಇಬ್ಬರು ಏಜೆಂಟರು ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ನನ್ನ ಪುತ್ರಿ ಹಲೀಮ್ ಉನ್ನಿಸಾಳನ್ನು 2017ರ ಮಾರ್ಚ್‍ನಲ್ಲಿ ರಿಯಾದ್‍ ಗೆ ಕರೆದುಕೊಂಡು ಹೋಗಿದ್ದರು. ಆದರೆ ಆಕೆಗೆ ಅಲ್ಲಿ ಹಿಂಸೆ ಕೊಡಲಾಗುತ್ತಿದೆ. ಯಾವಾಗ ಅವಳು ವಾಪಸ್ ಬರುತ್ತಾಳೆ ಎಂಬುದೂ ಗೊತ್ತಾಗುತ್ತಿಲ್ಲ. ಸರ್ಕಾರ ಅವಳಿಗೆ ನೆರವಾಗಬೇಕು ಎಂದು ಹಬೀಬ್ ಉನ್ನಿಸಾ ಎಂಬವರು ಮನವಿ ಮಾಡಿಕೊಂಡಿದ್ದಾರೆ.

ಹಲೀಮ್‍ ಗೆ ತಿಂಗಳಿಗೆ 25 ಸಾವಿರ ಸಂಬಳ ಕೊಡುವುದಾಗಿ ಕರೆದುಕೊಂಡು ಹೋಗಿ ಅವಳನ್ನು ಅಲ್ಲಿ ಮನೆಗೆಲಸಕ್ಕೆ ಹಾಕಲಾಗಿದೆ. ಆಕೆಯನ್ನು ವಾಪಸ್ ತಂದು ಬಿಡುವಂತೆ ಏಜೆಂಟರಿಗೆ ಕೋರಿಕೊಂಡಿದ್ದರೂ ಅವರು ಪ್ರತಿಕ್ರಿಯಿಸಿಲ್ಲ ಎಂದು ಸೋದರ ಮೊಹಮ್ಮದ್ ಅಸಿಫ್ ಖಾನ್ ಅಲವತ್ತುಕೊಂಡಿದ್ದು, ನೆರವಿಗಾಗಿ ಭಾರತೀಯ ರಾಯಭಾರ ಕಚೇರಿಯನ್ನೂ ಸಂಪರ್ಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...