alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಠಪೂರ್ತಿ ಮದ್ಯ ಸೇವಿಸಿ ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಹರಿಹಾಯ್ದ ಯುವತಿ

ಕಂಠಪೂರ್ತಿ ಮದ್ಯ ಸೇವಿಸಿದ್ದ ಯುವತಿಯೊಬ್ಬಳು ಪೊಲೀಸರು ತಮ್ಮ ಕಾರನ್ನು ತಡೆ ಹಿಡಿದರೆಂಬ ಆಕ್ರೋಶದಲ್ಲಿ ನಡು ರಸ್ತೆಯಲ್ಲೇ ಪೊಲೀಸರ ವಿರುದ್ದ ಹರಿಹಾಯ್ದಿದ್ದಲ್ಲದೇ ಈ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಮುಂದಾದ ಸ್ಥಳೀಯ ಟಿವಿ ಚಾನೆಲ್ ಕ್ಯಾಮರಾಮನ್ ನನ್ನು ಬೆನ್ನತ್ತಿ ಹೋಗಿದ್ದಾಳೆ.

ಹೈದರಾಬಾದಿನಲ್ಲಿ ಈ ಘಟನೆ ನಡೆದಿದ್ದು, ಯುವತಿ ಮತ್ತಾಕೆಯ ಸ್ನೇಹಿತ ಕಾರಿನಲ್ಲಿ ಬರುತ್ತಿರುವಾಗ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ಮಾಡುತ್ತಿದ್ದ ಪೊಲೀಸರು ಇವರುಗಳ ಕಾರನ್ನು ತಡೆದು ನಿಲ್ಲಿಸಿದ್ದಾರೆ.

ವಾಹನ ಚಾಲನೆ ಮಾಡುತ್ತಿದ್ದವನಿಗೆ ಬ್ರೆಥಲೈಸರ್ ಪರೀಕ್ಷೆಗೊಳಗಾಗಲು ಹೇಳಿದ್ದು, ಆಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವತಿ ಇಳಿದುಬಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ನಿಂತಿದ್ದಾಳೆ. ಅಷ್ಟೇ ಅಲ್ಲ ಈ ದೃಶ್ಯ ಸರೆ ಹಿಡಿಯಲು ಮುಂದಾದ ಸ್ಥಳೀಯ ಟಿವಿ ಚಾನೆಲ್ ವರದಿಗಾರನಿಗೆ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದಾಳೆ.

ಇದ್ಯಾವುದನ್ನು ಲೆಕ್ಕಿಸದ ಪೊಲೀಸರು, ಚಾಲಕನ ಬ್ರೆಥಲೈಸರ್ ಪರೀಕ್ಷೆ ನಡೆಸಿದ್ದು, ನಿಗದಿತ ಮಟ್ಟಕ್ಕಿಂತ ಹೆಚ್ಚು ಮದ್ಯ ಸೇವಿಸಿದ್ದನೆನ್ನಲಾಗಿದೆ. ಯುವತಿಯೂ ಕಂಠಪೂರ್ತಿ ಮದ್ಯ ಸೇವಿಸಿದ್ದು, ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...