alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಕೊಲೆ ಆರೋಪದಿಂದ ನೊಂದ ಪತ್ನಿ ಮಾಡಿದ್ದೇನು?

suicide-try

ಅಮೆರಿಕದಲ್ಲಿ ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡಿರುವ ಎನ್ ಆರ್ ಐ ಟೆಕ್ಕಿ ಜಿ.ಮಧುಕರ್ ರೆಡ್ಡಿ ಅವರ ಪತ್ನಿ ಕೂಡ ಗಂಡನ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೆಲಂಗಾಣದ ಚೈತನ್ಯಪುರಿಯಲ್ಲಿರುವ ತಂದೆ ಮನೆಯಲ್ಲಿ ಜಿ.ಸ್ವಾತಿ ಸುಮಾರು ಅರ್ಧ ಬಾಟಲಿಯಷ್ಟು ಹಾರ್ಪಿಕ್ ಬಾತ್ ರೂಮ್ ಕ್ಲೀನರ್ ಕುಡಿದುಬಿಟ್ಟಿದ್ಲು.

ಖಿನ್ನತೆಯಿಂದ ಪತಿ ಮಧುಕರ್ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಸ್ವಾತಿ ಪೊಲೀಸರಿಗೆ ತಿಳಿಸಿದ್ಲು. ಆದ್ರೆ ಮಧುಕರ್ ಹೆತ್ತವರು ಮಾತ್ರ ಸ್ವಾತಿಯೇ ಪತಿಯನ್ನು ಕೊಲೆ ಮಾಡಿದ್ದಾಳೆಂದು ಗಂಭೀರ ಆರೋಪ ಮಾಡಿದ್ದರು. ಗಂಡನ ಮನೆಯವರ ಕಿರುಕುಳದಿಂದ ನೊಂದಿದ್ದ ಸ್ವಾತಿ ಆತ್ಮಹತ್ಯೆ ನಿರ್ಧಾರ ಮಾಡಿದ್ಲು.

ಗುರುವಾರ ರಾತ್ರಿ ಸ್ವಾತಿ ತನ್ನ ಮಗಳೊಂದಿಗೆ ಕೋಣೆಯಲ್ಲಿ ಮಲಗಿದ್ಲು. ಸ್ವಾತಿಯ ಪೋಷಕರು ಬೇರೆ ಕೋಣೆಯಲ್ಲಿ ನಿದ್ದೆ ಹೋಗಿದ್ರು. ಬೆಳಗ್ಗೆ 5.30ರ ಸುಮಾರಿಗೆ ಸ್ವಾತಿ ಹಾರ್ಪಿಕ್ ಕುಡಿದುಬಿಟ್ಟಿದ್ದಾಳೆ. ನಂತರ ನೋವು ತಾಳಲಾರದೆ ಬೊಬ್ಬೆ ಹೊಡೆಯಲಾರಂಭಿಸಿದ್ಲು. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು.

ಸ್ವಾತಿ ಸುಮಾರು ಅರ್ಧ ಲೀಟರ್ ನಷ್ಟು ಹಾರ್ಪಿಕ್ ಕುಡಿದಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಆಕೆಯ ಕರುಳು ಮತ್ತು ಹೊಟ್ಟೆಗೆ ತೀವ್ರ ಹಾನಿಯಾಗಿದ್ದು, ಐಸಿಯುನಲ್ಲಿ ಇಡಲಾಗಿದೆ. ಸ್ವಾತಿಯ ಮಾವ ಜಿ.ಬಾಲ ರೆಡ್ಡಿ, ಅತ್ತೆ ಸುಗುಣಾ ಹಾಗೂ ನಾದಿನಿ ಕಲ್ಪನಾ ವಿರುದ್ಧ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...