alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ವೋಟರ್ ಐಡಿಯಲ್ಲಿ ಬಾಲಿವುಡ್ ಸ್ಟಾರ್ ಫೋಟೋ

salmankhan 11

ದಾಖಲೆಗಳಲ್ಲಿ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ ಇದೆ. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮೊದಲಾದ ದಾಖಲೆಗಳಲ್ಲಿ ಕೆಲವೊಮ್ಮೆ ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ, ವಯಸ್ಸು ಏರುಪೇರಾಗಿ ಗೊಂದಲ ಉಂಟಾಗಿದ್ದ ಬಗ್ಗೆ ಕೇಳಿದ್ದೇವೆ.

ಹೈದರಾಬಾದ್ ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದ್ದು, ಇಲ್ಲಿನ ಮತಗಟ್ಟೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚುನಾವಣಾ ಆಯೋಗದ ಸಿಬ್ಬಂದಿ ಕೆಲವು ಕ್ಷಣ ದಂಗಾಗಿದ್ದಾರೆ. ಕಾರಣ, ಮತದಾನ ಮಾಡಲು ಬಂದ ವ್ಯಕ್ತಿ ಹೆಸರು ಸಲ್ಮಾನ್ ಖಾನ್ ಎಂದಿತ್ತು. ತಂದೆಯ ಹೆಸರು ಸಲೀಂ ಖಾನ್ ಎಂದಿತ್ತಲ್ಲದೇ, ಐಡಿ ಕಾರ್ಡ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಫೋಟೋವೇ ಇತ್ತು. ಪುಣ್ಯಕ್ಕೆ ಈ ವ್ಯಕ್ತಿಗೆ 60 ವರ್ಷ ವಯಸ್ಸು. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ 50 ವರ್ಷ.

ಹೀಗೆ ಹೆಸರು, ತಂದೆಯ ಹೆಸರು ಸಲ್ಮಾನ್ ಖಾನ್, ಸಲೀಂ ಖಾನ್ ಎಂದಿರುವುದಲ್ಲದೇ, ಸಲ್ಮಾನ್ ಫೋಟೋ ಇರುವ ವೋಟರ್ ಐಡಿ ತಂದಿದ್ದ ವ್ಯಕ್ತಿಗೆ ಮತದಾನಕ್ಕೆ ಅವಕಾಶ ಕೊಟ್ಟಿಲ್ಲ. ಕೊನೆಗೆ ಆ ವ್ಯಕ್ತಿ ಬಂದ ದಾರಿಯಲ್ಲೇ ವಾಪಸ್ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...