alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವತಿ ವಿಡಿಯೋ ಫುಲ್ ವೈರಲ್

ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್, ಲೈಸೆನ್ಸ್ ಇರಬೇಕಾಗುತ್ತದೆ. ಹೆಲ್ಮೆಟ್ ಬಳಸದೆ ವಾಹನ ಸವಾರಿ ಮಾಡಿದ್ರೆ, ದಂಡ ಫಿಕ್ಸ್. ಪೊಲೀಸರು ಹೆಲ್ಮೆಟ್ ಧರಿಸದೆ ಇರೋರನ್ನು ಹುಡುಕಿ ದಂಡ ಹಾಕೋದು ಕಾಮನ್. ಆದ್ರೆ, ಹೈದರಾಬಾದ್ ನಲ್ಲಿ ಯುವತಿಯೊಬ್ಬಳು ತನ್ನನ್ನು ಪ್ರಶ್ನಿಸಿದ ಪೊಲೀಸರ ವಿರುದ್ದ  ಅಸಭ್ಯ ಭಾಷೆ ಬಳಸಿದ್ದಾಳೆ.

ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಈ ಯುವತಿ ಚಾಲನಾ ಪರವಾನಿಗೆ ಕೇಳಿದ್ರೆ, ಅದನ್ನು ತೋರಿಸದೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಯುವತಿ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಕಾರಣ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಆಕೆ ಅಸಭ್ಯ ಭಾಷೆ ಬಳಸಿರೋದು ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕಿದ್ದಾರೆ. ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದರೂ ಅದನ್ನು ಲೆಕ್ಕಿಸದ ಯುವತಿ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...