alex Certify
ಕನ್ನಡ ದುನಿಯಾ       Mobile App
       

Kannada Duniya

150 ರೂ. ಲಂಚ ಕೊಡಲಾಗದೆ ಪ್ರಾಣತೆತ್ತ ಯುವಕ

bribe

ಹೈದ್ರಾಬಾದ್ ನ ಚೆಸ್ಟ್ ಆಸ್ಪತ್ರೆಯಲ್ಲಿ 30 ವರ್ಷದ ಯುವಕ ಕೆ.ಎನ್. ಕೃಷ್ಣಯ್ಯ ಮೃತಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಕೊಡದೇ ಇದ್ದಿದ್ದೇ ಇದಕ್ಕೆ ಕಾರಣ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ವಾರ್ಡ್ ಬಾಯ್ ಗಳಾದ ಧನಂಜಯ್ ರಾಜು ಹಾಗೂ ಮೊಹಮದ್ ನದೀಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರನ್ನೂ ಕರ್ತವ್ಯದಿಂದ ವಜಾ ಮಾಡಲಾಗಿದೆ.

ಕ್ಷಯ ರೋಗದಿಂದ ಬಳಲುತ್ತಿದ್ದ ಕೃಷ್ಣಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶ ಸಮಸ್ಯೆ ಇದ್ದಿದ್ರಿಂದ ಬೆಳಗ್ಗೆಯಿಂದಲೇ ಆಕ್ಸಿಜನ್ ಪೂರೈಸಲಾಗುತ್ತಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಸಿಲಿಂಡರ್ ಖಾಲಿಯಾಗಿತ್ತು. ಈ ಬಗ್ಗೆ ಕೃಷ್ಣಯ್ಯ ಪತ್ನಿ ನರ್ಸ್ ಗಳಿಗೆ ಮಾಹಿತಿ ನೀಡಿದ್ರು.

ನರ್ಸ್ ಗಳು ವಾರ್ಡ್ ಬಾಯ್ ಗಳಿಗೆ ಸಿಲಿಂಡರ್ ತರುವಂತೆ ಸೂಚಿಸಿದ್ರು. ಆದ್ರೆ 150 ರೂಪಾಯಿ ಲಂಚ ಕೊಟ್ರೆ ಮಾತ್ರ ಆಕ್ಸಿಜನ್ ಸಿಲಿಂಡರ್ ಕೊಡೋದಾಗಿ ಅವರು ಪಟ್ಟು ಹಿಡಿದಿದ್ದಾರೆ. ಕೃಷ್ಣಯ್ಯ ಪತ್ನಿ ಬಳಿ ನಯಾಪೈಸೆ ಇರಲಿಲ್ಲ. ಆಕೆ ಹಣ ಕೊಡಲಿಲ್ಲ ಅಂತಾ ವಾರ್ಡ್ ಬಾಯ್ ಗಳು ಆಕ್ಸಿಜನ್ ಅಳವಡಿಸಿಲ್ಲ, ಹಾಗಾಗಿ ಕೃಷ್ಣಯ್ಯ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ. ಡ್ಯೂಟಿ ಡಾಕ್ಟರ್ ಗಳ ಮಾತಿಗೂ ವಾರ್ಡ್ ಬಾಯ್ ಗಳು ಕ್ಯಾರೇ ಅಂದಿಲ್ಲವಂತೆ.

ಮಧ್ಯಾಹ್ನ 2 ಗಂಟೆಗೆ ಹಿರಿಯ ಡಾಕ್ಟರ್ ಗಳೆಲ್ಲ ಆಸ್ಪತ್ರೆಯಿಂದ ಹೊರಟುಬಿಡ್ತಾರೆ. ನಂತರ ನರ್ಸ್ ಗಳು ಮತ್ತು ವಾರ್ಡ್ ಬಾಯ್ ಗಳದ್ದೇ ದರ್ಬಾರ್. ರೋಗಿಗಳಿಂದ ಸುಲಿಗೆ ಮಾಡೋದೇ ಇವರ ಕಾಯಕವಾಗಿಬಿಟ್ಟಿದೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸೋದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...