alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಚ ಕೊಡದ್ದಕ್ಕೆ ರೋಗಿಗೆ ಇದೆಂಥಾ ದುಃಸ್ಥಿತಿ..!

chair

ಹೈದ್ರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ರೋಗಿ ಲಂಚ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಅವನಿಗೆ ವೀಲ್ ಚೇರ್ ಕೊಡದೆ ಸಿಬ್ಬಂದಿ ಸತಾಯಿಸಿದ್ದಾರೆ. ನಿತ್ರಾಣನಾಗಿದ್ದ ವ್ಯಕ್ತಿಯನ್ನು ಆತನ ಪತ್ನಿ, ಮಕ್ಕಳ ಆಟಿಕೆಯ ಮೂರು ಚಕ್ರದ ಸೈಕಲ್ ಮೇಲೆ ಕೂರಿಸಿಕೊಂಡು ಕರೆತಂದಿದ್ದಾಳೆ.

40 ವರ್ಷದ ರಾಜು ಎಂಬಾತನಿಗೆ ಕಳೆದ ಆಗಸ್ಟ್ ನಲ್ಲಿ ಎಲೆಕ್ಟ್ರಿಕ್ ಶಾಕ್ ತಗುಲಿತ್ತು. ಸುಟ್ಟ ಗಾಯಗಳಿಗೆ ಇದೇ ಆಸ್ಪತ್ರೆಯಲ್ಲಿ ರಾಜು ಚಿಕಿತ್ಸೆ ಪಡೆಯುತ್ತಿದ್ದ. ಆತನಿಂದ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ರಾಜುಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದಾರಂತೆ.

ಆದ್ರೆ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿಯಿಲ್ಲ ಅನ್ನೋ ನೆಪವೊಡ್ಡಿ ಸರ್ಜರಿ ಮುಂದೂಡುತ್ತಿದ್ದಾರೆ ಅನ್ನೋದು ಪತ್ನಿ ಸಂತೋಷಿ ಆರೋಪ. ಆಸ್ಪತ್ರೆಯ ವಾರ್ಡ್ ಬಾಯ್ ಗಳು ರೋಗಿಗೆ ವೀಲ್ ಚೇರ್ ಕೊಡಲು 100-200 ರೂಪಾಯಿ ಲಂಚ ಕೇಳ್ತಾರಂತೆ. ಲಂಚ ಕೊಡಲು ಹಣವಿಲ್ಲದೆ ಸಂತೋಷಿ ತನ್ನ ಮಗನ ಮೂರು ಚಕ್ರದ ಸೈಕಲ್ ನಲ್ಲಿ ಪತಿಯನ್ನು ಕೂರಿಸಿಕೊಂಡು ಹೋಗಿದ್ದಾಳೆ.

ಈ ಹಿಂದೆ ಐದಾರು ಬಾರಿ ಇದೇ ರೀತಿ ಲಂಚ ಕೊಟ್ಟಿದ್ದೇನೆ, ಆದ್ರೆ ಈಗ ನನ್ನ ಬಳಿ ಹಣವಿಲ್ಲ ಅಂತಾ ಅಸಹಾಯಕತೆ ತೋಡಿಕೊಂಡಿದ್ದಾಳೆ. ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸಚಿವ ಕೆ.ಟಿ.ರಾಮರಾವ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...