alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹೆಲ್ಮೆಟ್ ಧರಿಸದವನ ಕುರಿತು ಪೊಲೀಸರು ಮಾಡಿರುವ ಟ್ವೀಟ್

ಹೈದರಾಬಾದ್ ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗಾಗಿ ಹಲವು ಪೋಷಕರು ಜೈಲಿಗೆ ಹೋಗುವಂತಾಗಿದ್ದು, ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಲು ಪೋಷಕರು ಈಗ ಹಿಂದೇಟು ಹಾಕುವಂತಾಗಿದೆ.

ಈ ಮಧ್ಯೆ ತಾವು ಕಾನೂನು ಕ್ರಮ ಕೈಗೊಳ್ಳುವುದರಲ್ಲಿ ಮಾತ್ರವಲ್ಲ ನಿಯಮ ಉಲ್ಲಂಘಿಸುವವರಿಗೆ ಟಾಂಗ್ ಕೊಡುವುದರಲ್ಲೂ ಹಿಂದೆ ಬಿದ್ದಿಲ್ಲ ಎಂಬುದನ್ನು ಹೈದರಾಬಾದ್ ಪೊಲೀಸರು ಮತ್ತೊಮ್ಮೆ ನಿರೂಪಿಸಿದ್ದು, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಸವಾರನ ಫೋಟೋ ಸಮೇತ ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ.

ಕೃಷ್ಣಾರೆಡ್ಡಿ ಎಂಬ ಈ ವ್ಯಕ್ತಿ ಹೆಲ್ಮೆಟ್ ಧರಿಸದಿರುವುದು ಮಾತ್ರವಲ್ಲ ತನ್ನ ಬೈಕ್ ಹಿಂದೆ ‘”No Helmet, I die like real men.” ಎಂದು ಬರೆಸಿಕೊಂಡಿದ್ದು, ಟ್ರಾಫಿಕ್ ಪೊಲೀಸರ ಗಮನ ಸೆಳೆದಿತ್ತು. ಹೀಗಾಗಿ ಚಲನ್ ಸಮೇತ ಆತನ ಫೋಟೋವನ್ನು ಟ್ವೀಟರ್ ನಲ್ಲಿ ಹಾಕಿದ ಪೊಲೀಸರು “We r extremely Sorry Mr. Krishna Reddy Sir. We won’t let U die. We will see that U “LIVE LIKE REAL MEN”. Please wear helmet & ride (sic).” ಎಂದು ಹಾಕಿದ್ದು ಟ್ವಿಟ್ಟಾರ್ಥಿಗಳ ಪ್ರಶಂಸೆಗೆ ಪಾತ್ರವಾಗಿದೆ.

ಬಹುತೇಕರು, ಹೆಲ್ಮೆಟ್ ಧರಿಸದ ಕೃಷ್ಣಾರೆಡ್ಡಿ ನಡೆಯನ್ನು ಖಂಡಿಸಿದ್ದಾರಲ್ಲದೇ ರಾಜಾರೋಷವಾಗಿ ತಾನು ಹೆಲ್ಮೆಟ್ ಧರಿಸುವುದಿಲ್ಲವೆಂದು ಬೋರ್ಡ್ ಹಾಕಿಕೊಂಡಿದ್ದಕ್ಕೆ ಛೀಮಾರಿ ಹಾಕಿದ್ದಾರೆ. ಮತ್ತೆ ಕೆಲವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಪೊಲೀಸರ ಫೋಟೋಗಳನ್ನು ಹಾಕಿ ಇವರುಗಳ ವಿರುದ್ದವೂ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ. ಇದಕ್ಕೂ ಉತ್ತರಿಸಿರುವ ಟ್ರಾಫಿಕ್ ಪೊಲೀಸರು, ತಪ್ಪಿತಸ್ಥ ಪೇದೆಗೆ ದಂಡ ವಿಧಿಸಿರುವ ಚಲನ್ ಹಾಕಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...