alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗ್ರೂಪ್ ನಲ್ಲಿ ಪ್ರೇಯಸಿಯ ಮಾನ ಕಳೆದ ಟೆಕ್ಕಿ

ಪ್ರಿಯತಮೆಯ ಜೊತೆಗಿನ ನಿಕಟ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದ ಟೆಕ್ಕಿಯನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ಆ ಯುವತಿ ಇವನ ಸಹೋದ್ಯೋಗಿ, ಕಳೆದ ಕೆಲ ವರ್ಷಗಳಿಂದ ಇಬ್ಬರ ಮಧ್ಯೆ ಸಂಬಂಧವಿತ್ತು.

28 ವರ್ಷದ ಟೆಕ್ಕಿ ನಾಗೇಶ್ವರ್ ರಾವ್ ತನ್ನ ಫೋನ್ ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನೆಲ್ಲ ಸೇವ್ ಮಾಡಿಟ್ಟುಕೊಂಡಿದ್ದ. ಅದನ್ನು ಸ್ನೇಹಿತರ ವಾಟ್ಸಾಪ್ ಗ್ರೂಪ್ ಗೆ ಶೇರ್ ಮಾಡಿದ್ದಾನೆ. ವಾಟ್ಸಾಪ್ ಗ್ರೂಪ್ ನಲ್ಲಿ ಫೋಟೋಗಳು ಹರಿದಾಡ್ತಿರುವ ಬಗ್ಗೆ ಸಂಬಂಧಿಕರೊಬ್ಬರು ಯುವತಿಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಕೇಳಿದ್ರೆ ನಾಗೇಶ್ವರ ರಾವ್ ಸರಿಯಾಗಿ ಉತ್ತರಿಸಿರಲಿಲ್ಲ. ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ನಾಗೇಶ್ವರ್ ರಾವ್ ನನ್ನು ಈಗಾಗ್ಲೇ ಪೊಲೀಸರು ಬಂಧಿಸಿದ್ದು, ಆತನ ಮೊಬೈಲ್ ನಲ್ಲಿ ಸಾಕ್ಷ್ಯಗಳು ಸಹ ಲಭ್ಯವಾಗಿವೆ. ಆತ ಹೈದ್ರಾಬಾದ್ ಹೊರವಲಯದಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...