alex Certify
ಕನ್ನಡ ದುನಿಯಾ       Mobile App
       

Kannada Duniya

ಮುರಿದುಬಿದ್ದ ಮದುವೆ, ಬಿಡಲೊಪ್ಪದ ದುರುಳ ಮಾಡಿದ್ದೇನು?

soft

ಹೈದರಾಬಾದ್: ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕೆನಡಾದಲ್ಲಿ ಕೆಲಸಕ್ಕಿರುವ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಸುಮಾರು 40 ವರ್ಷದ ಅಶೋಕ್ ಕುಮಾರ್ ಬಂಧಿತ ಆರೋಪಿ.

ಕೆನಡಾದಲ್ಲಿ ನೆಲೆಸಿರುವ ಅಶೋಕ್ ಕುಮಾರ್ ಭಾರತಕ್ಕೆ ಬಂದಿದ್ದು, ಮದುವೆಯಾಗಲು ತೀರ್ಮಾನಿಸಿದ್ದರು. ಹೈದರಾಬಾದ್ ನಲ್ಲಿ ಮದುವೆಗೆ ಹುಡುಗಿ ಹುಡುಕುತ್ತಿದ್ದು, ವೈದ್ಯೆಯೊಬ್ಬರನ್ನು ಗೊತ್ತು ಮಾಡಲಾಗಿದೆ. ಆದರೆ, ಮಾತುಕತೆಯ ಸಂದರ್ಭದಲ್ಲಿ ವ್ಯತ್ಯಾಸವಾಗಿ ಮದುವೆ ಮುರಿದುಬಿದ್ದಿದೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಅಶೋಕ್ ಕುಮಾರ್ ಆಕೆಗೆ ಕಿರುಕುಳ ನೀಡಿದ್ದಾನೆ. ವೈದ್ಯೆಯ ಮೊಬೈಲ್ ಗೆ ಅಶ್ಲೀಲ ಮೆಸೇಜ್ ಕಳಿಸಿದ್ದಾನೆ. ಅಲ್ಲದೇ, ಆಕೆಯ ಹೆಸರಲ್ಲಿ ನಕಲಿ ಇ ಮೇಲ್ ಐಡಿ ಕ್ರಿಯೇಟ್ ಮಾಡಿದ್ದಾನೆ.

ನಕಲಿ ಇ ಮೇಲ್ ನಿಂದ ವೈದ್ಯೆಯ ಸಂಬಂಧಿಕರಿಗೆ, ಪರಿಚಿತರಿಗೆಲ್ಲಾ ಅಶ್ಲೀಲ ಪೋಟೋ ಕಳಿಸಿದ್ದಾನೆ. ಕೊನೆಗೆ ವೈದ್ಯೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೇಸು ದಾಖಲಿಸಿಕೊಂಡಿರುವ ಪೊಲೀಸರು ಹೈದರಾಬಾದ್ ನಾರಾಯಣಗುಡದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...