alex Certify
ಕನ್ನಡ ದುನಿಯಾ       Mobile App
       

Kannada Duniya

ಕುಟುಂಬ ಸದಸ್ಯರ ಕಣ್ಣ ಮುಂದೆಯೇ ನಡೆಯಿತು ಸೆಲ್ಫಿ ದುರಂತ

animal parkವಿಶ್ವದಾದ್ಯಂತ ಸೆಲ್ಫಿ ದುರಂತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿಭಿನ್ನವಾಗಿ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅತಿ ಹೆಚ್ಚು ಲೈಕ್ಸ್ ಗಳಿಸಬೇಕೆಂಬ ಧಾವಂತದಲ್ಲಿ ಸಾವಿಗೀಡಾಗುತ್ತಿದ್ದು, ಅಂತಹುದ್ದೇ ಒಂದು ಪ್ರಕರಣ ಹೈದರಾಬಾದಿನಲ್ಲಿ ನಡೆದಿದೆ.

ತನ್ನ ಕುಟುಂಬ ಸದಸ್ಯರ ಜೊತೆ ಹೈದರಾಬಾದಿನ ನೆಹರು ಜುವಾಲಜಿಕಲ್ ಪಾರ್ಕಿಗೆ ಪ್ರವಾಸ ಬಂದಿದ್ದ 17 ವರ್ಷದ ಬಾಲಕನೊಬ್ಬ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕುಟುಂಬ ಸದಸ್ಯರ ಕಣ್ಣ ಮುಂದೆಯೇ ಸಾವನ್ನಪ್ಪಿದ್ದಾನೆ. ಮಂಜೀತ್ ಚೌಧರಿ ಮೃತಪಟ್ಟ ಬಾಲಕನಾಗಿದ್ದು, ಬಂಡೆ ಮೇಲೇರಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಈ ದುರಂತ ಸಂಭವಿಸಿದೆ.

ಮಂಜೀತ್ ಚೌಧರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಆತನ ತಲೆ ಬಂಡೆಗೆ ತಗುಲಿ ತೀವ್ರ ರಕ್ತಸ್ರಾವವಾಗಿದೆ. ಸ್ಥಳದಲ್ಲಿ ಪಾರ್ಕಿನ ಯಾವುದೇ ಸಿಬ್ಬಂದಿ ಇರಲಿಲ್ಲವೆನ್ನಲಾಗಿದ್ದು, ಬಳಿಕ ಮಂಜೀತ್ ಚೌಧರಿಯನ್ನು ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಸಾವಿಗೀಡಾಗಿದ್ದಾನೆ. ಈ ಸಂಬಂಧ ಬಹದ್ದೂರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...