alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಜೀವಕ್ಕೆ ಮುಳುವಾಯ್ತು ರಿಯಾಲಿಟಿ ಷೋ ಸ್ಟಂಟ್

reality stuntಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಷೋ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ನಲ್ಲಿ ಸ್ಪರ್ಧಿಯೊಬ್ಬರು ಮಾಡಿದ್ದ ಸ್ಟಂಟ್ ನೋಡಿದ್ದ ಯುವಕನೊಬ್ಬ ತಾನೂ ಅದೇ ರೀತಿ ಮಾಡಲು ಹೋಗಿ ದುರಂತ ಸಾವನ್ನಪ್ಪಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

19 ವರ್ಷದ ಮಹಮ್ಮದ್ ಜಲಾಲುದ್ದೀನ್ ಸಾವನ್ನಪ್ಪಿದವನಾಗಿದ್ದು, ಈತ ತನ್ನ ಸ್ನೇಹಿತರ ಬಳಿ ತಾನೂ ರಿಯಾಲಿಟಿ ಷೋ ನಲ್ಲಿ ಮಾಡಿದಂತೆ ಬೆಂಕಿಯ ಸ್ಟಂಟ್ ಮಾಡುವುದಾಗಿ ತಿಳಿಸಿದ್ದಾನೆ. ಜೊತೆಗೆ ಇದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುವಂತೆಯೂ ಸ್ನೇಹಿತರಿಗೆ ತಿಳಿಸಿದ್ದಾನೆ.

ಬಾಯಿಯಲ್ಲಿ ಸೀಮೆಎಣ್ಣೆ ತುಂಬಿಕೊಂಡು ಅದನ್ನು ಕೈಯ್ಯಲ್ಲಿಡಿದಿದ್ದ ಉರಿಯುವ ಪಂಜಿನ ಕೋಲಿನ ಮೇಲೆ ಉಗಿದಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಆತನ ಬಟ್ಟೆಗೆ ತಗುಲಿದ್ದು, ಶೇ.60 ರಷ್ಟು ಸುಟ್ಟಗಾಯಗಳಾಗಿದೆ. ಕೂಡಲೇ ಅವನನ್ನು ಉಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...