alex Certify
ಕನ್ನಡ ದುನಿಯಾ       Mobile App
       

Kannada Duniya

28 ವರ್ಷದ ಬಳಿಕ ಒಂದುಗೂಡಿದ ತಾಯಿ- ಮಕ್ಕಳು

mother and daughtersಹೈದರಾಬಾದ್ ಪೊಲೀಸರು ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ. 28 ವರ್ಷಗಳ ಹಿಂದೆ ತಾಯಿಯಿಂದ ಬೇರ್ಪಟಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೊನೆಗೂ ಒಂದುಗೂಡಿಸಿದ್ದಾರೆ. ಇದಕ್ಕಾಗಿ ಸತತ 6 ತಿಂಗಳ ಕಾಲ ಶ್ರಮಿಸಿದ್ದಾರೆ ಪೊಲೀಸರು.

ಹೈದರಾಬಾದಿನ ಸಂತೋಷ್ ನಗರದ ನಜಿಯಾ ಬೇಗಂ 1981 ರಲ್ಲಿ ಯುಎಇ ಯ ರಶೀದ್ ಈದ್ ಒಬೇದ್ ರಿಫಾಕ್ ಮಸ್ಮಾರಿ ಎಂಬಾತನನ್ನು ಎರಡನೇ ವಿವಾಹವಾಗಿದ್ದರು. ಇವರಿಬ್ಬರಿಗೆ ಅಯೇಷಾ ಹಾಗೂ ಫಾತೀಮಾ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದು, ಇದಾದ ಕೆಲ ದಿನಗಳ ಬಳಿಕ ಪತಿಯ ಮೊದಲಿನ ಪತ್ನಿಯೊಂದಿಗೆ ಭಿನ್ನಾಭಿಪ್ರಾಯ ಏರ್ಪಟ್ಟ ಕಾರಣ, ನಜಿಯಾ ಬೇಗಂ ಪತಿಗೆ ವಿಚ್ಚೇದನ ನೀಡಿ ವಾಪಾಸ್ ಭಾರತಕ್ಕೆ ಮರಳಿ ಬಂದು ಮತ್ತೊಂದು ವಿವಾಹವಾಗಿದ್ದರು.

ತಮ್ಮ ತಾಯಿ ಪ್ರೀತಿಯಿಂದ ವಂಚಿತರಾಗಿದ್ದ ಅಯೇಷಾ ಹಾಗೂ ಫಾತೀಮಾ ವಯಸ್ಕರಾದ ಬಳಿಕ ತಾಯಿಯನ್ನು ಭೇಟಿ ಮಾಡಬೇಕೆಂದು ನಿಶ್ಚಯಿಸಿದ್ದರು. ಇದಕ್ಕಾಗಿ ಹೈದರಾಬಾದಿಗೆ ಬಂದಿದ್ದ ಅವರುಗಳ ಬಳಿ ಇದ್ದದ್ದು ತಾಯಿಯ ಒಂದು ಹಳೆಯ ಫೋಟೋ ಮಾತ್ರ. ಹೈದರಾಬಾದ್ ಪೊಲೀಸರಿಗೆ ಈ ಸಹೋದರಿಯರು ಮೊರೆ ಹೋಗಿದ್ದು, ನಜಿಯಾ ಬೇಗಂ ಪತ್ತೆಗೆ ಒಂದು ತಂಡವನ್ನು ರಚಿಸಲಾಗಿತ್ತು. ಕಡೆಗೂ ಈ ತಂಡ ನಜಿಯಾ ಬೇಗಂರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ತಾಯಿ, ಮಕ್ಕಳನ್ನು 28 ವರ್ಷಗಳ ಬಳಿಕ ಒಂದುಗೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...