alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕ್ ನಲ್ಲೇ ಸೆಕ್ಸ್: ಭದ್ರತಾ ಸಿಬ್ಬಂದಿಯೇ ಸಾಥ್

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿರುವ ಪಾರ್ಕ್ ಗಳು ಬೆಡ್ ರೂಂ ಆಗಿ ಬದಲಾಗಿವೆ. ಇಲ್ಲಿಗೆ ಬರುವ ಪ್ರೇಮಿಗಳು ಸರಸ ಸಲ್ಲಾಪದಲ್ಲಿ ತೊಡಗುತ್ತಾರೆ. ಅಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಭದ್ರತಾ ಸಿಬ್ಬಂದಿ ಹಣ ಪಡೆದು ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಹೈದರಾಬಾದ್ ನ ಇಂದಿರಾ ಪಾರ್ಕ್, ಸಂಜೀವಯ್ಯ ಪಾರ್ಕ್, ದುರ್ಗಾ ಚೆರವು ಮೊದಲಾದ ಪಾರ್ಕ್ ಗಳಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಭದ್ರತಾ ಸಿಬ್ಬಂದಿ ಹಣ ಪಡೆದುಕೊಂಡು ಪಾರ್ಕ್ ನಲ್ಲಿರುವ ಮರೆಯಾದ ಸ್ಥಳಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತಾರೆ.

1 ಗಂಟೆಗೆ 500 ರೂ. ಪಡೆದುಕೊಳ್ಳುವ ಭದ್ರತಾ ಸಿಬ್ಬಂದಿ ಯುವಕ, ಯುವತಿಯರು ಮರೆಯಲ್ಲಿ ಇರಲು ಅವಕಾಶ ಮಾಡಿಕೊಡುತ್ತಾರೆ. ಪಾರ್ಕ್ ಗಳಲ್ಲಿ ಪೊದೆಗಳ ಮರೆಯಲ್ಲಿ, ಮರಗಳ ಮರೆಯಲ್ಲಿ ಅನೈತಿಕ ಚಟುವಟಿಕೆ ನಡೆಸಲು 50 ರೂ. ನಿಂದ 500 ರೂ. ವರೆಗೂ ರೇಟ್ ಫಿಕ್ಸ್ ಮಾಡಲಾಗಿದೆ.

ಇಲ್ಲಿಗೆ ಬರುವ ಕೆಲವರು ಭದ್ರತಾ ಸಿಬ್ಬಂದಿಗೆ ಹಣ ಕೊಟ್ಟು ಅಲ್ಲೇ ಮರೆಯಲ್ಲಿ ಸರಸವಾಡುತ್ತಾರೆ. ಭದ್ರತಾ ಸಿಬ್ಬಂದಿಯೇ ಭದ್ರತೆ ನೀಡುವುದರಿಂದ ಇತ್ತೀಚೆಗೆ ಪಾರ್ಕ್ ಗೆ ಬರುವ ಪ್ರೇಮಿಗಳ ಸಂಖ್ಯೆ ಭಾರೀ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಮರೆಯಲ್ಲಿ ಪ್ರೇಮಿಗಳು ಚಕ್ಕಂದವಾಡುವ ದೃಶ್ಯಗಳು ಕಂಡು ಬರುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಪಾರ್ಕ್ ಗೆ ಬಂದು ಮುಜುಗರ ಅನುಭವಿಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...