alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿಕೊಂಡು ಹೋದ ಪಾಲಕರು..!

girl-trapped-in-hyderabad

ಹೈದರಾಬಾದ್: ಮೂರು ವರ್ಷದ ಮಗಳನ್ನು ಒಂಟಿಯಾಗಿ ಕಾರಿನಲ್ಲಿ ಬಿಟ್ಟು ಕಾರನ್ನು ಲಾಕ್ ಮಾಡಿದ ಪಾಲಕರು ತಿಂಡಿ ತಿನ್ನಲೆಂದು ಹೊಟೇಲ್ ಗೆ ಹೋದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಕುಟುಂಬ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದು, ದಾರಿ ಮಧ್ಯೆ ಶಮ್ಶದ್ ಪುರದಲ್ಲಿ ತಿಂಡಿ ತಿನ್ನಲೆಂದು ಕಾರನ್ನು ನಿಲ್ಲಿಸಿದ ದಂಪತಿಗಳು ನಿದ್ದೆ ಮಾಡುತ್ತಿದ್ದ ಮಗಳನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿಕೊಂಡು ನಡೆದಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಎಚ್ಚರಗೊಂಡ ಮಗು ಕಾರಿನಲ್ಲಿ ತಂದೆ, ತಾಯಿ ಕಾಣಿಸದಿದ್ದಾಗಿ ಜೋರಾಗಿ ಅಳಲಾರಂಭಿಸಿದೆ.

ಕಾರಿನಲ್ಲಿ ಮಗು ಅಳುತ್ತಿರುವುದನ್ನು ನೋಡಿ ಅನೇಕರು ಧಾವಿಸಿ ಬಂದಿದ್ದಾರೆ. ಕೆಲವರು ಮಗುವಿಗೆ ಲಾಕ್ ಓಪನ್ ಮಾಡುವ ವಿಧಾನ ತಿಳಿಸಿದರಾದರೂ ಮಗು ಅಳುವುದನ್ನು ಬಿಟ್ಟು ಬೇರೇನೂ ಮಾಡಲಿಲ್ಲ. ಕೊನೆಗೊಬ್ಬ ವ್ಯಕ್ತಿ, ಕಾರಿನ ಲಾಕ್ ತೆಗೆಯುವಲ್ಲಿ ಸಫಲನಾಗಿದ್ದಾನೆ.

ತಿಂಡಿ ತಿಂದು ಕಾರಿನ ಬಳಿ ಬಂದ ಪಾಲಕರು, ಮಗು ಮಲಗಿದ್ದ ಕಾರಣ ನಾವು ಅವಳನ್ನು ಎಬ್ಬಿಸದೆ ಹಾಗೇ ಹೋದೆವು ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಆದರೆ ದಂಪತಿಗಳ ನಡೆಗೆ ಅಲ್ಲಿದ್ದವರು ಆಕ್ಷೇಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...