alex Certify
ಕನ್ನಡ ದುನಿಯಾ       Mobile App
       

Kannada Duniya

NRI ವಾಟ್ಸಾಪ್ ಡಿಪಿಯಲ್ಲಿ ತ್ರಿವಳಿ ತಲಾಖ್

dp

ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿರುವ ಎನ್ ಆರ್ ಐ ಒಬ್ಬ ತನ್ನ ವಾಟ್ಸಾಪ್ ಡಿಪಿಯಲ್ಲಿ ತ್ರಿವಳಿ ತಲಾಖ್ ಅಂತಾ ಬರೆದಿರೋ ಇಮೇಜ್ ಹಾಕಿಕೊಂಡಿದ್ದಾನೆ. ಪತ್ನಿಗೆ ಡೈವೋರ್ಸ್ ನೋಟಿಸ್ ಕಳಿಸಿ, ನಂತರ ವಾಟ್ಸಾಪ್ ಡಿಪಿಯಲ್ಲಿ ಈ ರೀತಿ ಹಾಕಿಕೊಂಡಿದ್ದಾನೆ ಅಂತಾ ನೊಂದ ಮಹಿಳೆಯ ತಾಯಿ ತಿಳಿಸಿದ್ದಾರೆ.

ಆತನ ಸಹೋದರ ಕೂಡ ತನ್ನ ಪತ್ನಿಯರಿಗೆ ಇದೇ ರೀತಿ ವಿಚ್ಛೇದನ ನೀಡಿದ್ದ ಅಂತಾ ಆರೋಪಿಸಿದ್ದಾರೆ. ಹೈದ್ರಾಬಾದ್ ನ ಮೊಹಮದ್ ಅಬ್ದುಲ್ ಅಕೀಲ್ ಎಂಬಾತ ಮದುವೆಯಾಗಿ ಪತ್ನಿಯನ್ನು ಅಮೆರಿಕಕ್ಕೆ ಕರೆದೊಯ್ದಿದ್ದ. ಅಲ್ಲಿ ಅವಳನ್ನು ಮನೆ ಕೆಲಸದವಳಂತೆ ನಡೆಸಿಕೊಂಡಿದ್ದಾನಂತೆ.

ಕೆಲ ದಿನಗಳ ಹಿಂದೆ ಅಬ್ದುಲ್ ಅಕೀಲ್ ತನ್ನ ಪತ್ನಿಗೆ ‘ತಲಾಖ್ ತಲಾಖ್ ತಲಾಖ್’ ಎಂದು 3 ಬಾರಿ ಮೆಸೇಜ್ ಕಳಿಸಿದ್ದ. ನಂತರ ಆತನ ಹೆತ್ತವರು ಅವಳನ್ನು ಮನೆಯಿಂದ ಹೊರಹಾಕಿದ್ದರು. ಈ ರೀತಿಯ ತಲಾಖ್ ಗೆ ಮಾನ್ಯತೆ ಇಲ್ಲ ಎಂದಿರುವ ಮಹಿಳೆ, ತನಗೆ ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡಿದ್ದಾಳೆ. ಆಕೆ ಪೊಲೀಸರಿಗೂ ದೂರು ನೀಡಿದ್ದು, ಅಬ್ದುಲ್ ಅಕೀಲ್ ಪೋಷಕರನ್ನು ಈಗಾಗ್ಲೇ ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...