alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾದ ಯುವಕ

accident hyderabadಹೈದರಾಬಾದಿನಲ್ಲಿ ನಡೆದ ಅಪಘಾತವೊಂದರಲ್ಲಿ ಯುವಕನೊಬ್ಬ ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾನೆ. ಆತ ಚಲಾಯಿಸುತ್ತಿದ್ದ ಬೈಕ್, ಟ್ರಕ್ ಅಡಿಗೆ ಸಿಲುಕಿ ನಜ್ಜುಗುಜ್ಜಾಗಿದ್ದು, ಯುವಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ತಪ್ಪಿಸಿಕೊಂಡಿದ್ದಾನೆ.

ಪವನ್ ಎಂಬ 18 ವರ್ಷದ ಯುವಕ ಶನಿವಾರ ಬೆಳಿಗ್ಗೆ ಹಬೀಬ್ ನಗರದ ಲೋಯೆಲ್ಲಾ ಸ್ಕೂಲ್ ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಅಂಬಾ ಆಸ್ಪತ್ರೆ ಬಳಿ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡ ಈತ ಟ್ರಕ್ ಅಡಿಗೆ ಜಾರಿದ್ದಾನೆ.

ಇದನ್ನು ಕಂಡ ಚಾಲಕ ಕೂಡಲೇ ಬ್ರೇಕ್ ಹಾಕಿದ್ದು, ಈ ರಭಸಕ್ಕೆ ಚಾಲಕನ ಪಕ್ಕದಲ್ಲಿದ್ದ ಕ್ಲೀನರ್ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಪವನ್ ಚಲಾಯಿಸುತ್ತಿದ್ದ ಬೈಕ್ ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪವನ್ ಅಪಾಯದಿಂದ ಪಾರಾಗಿದ್ದಾನೆ. ಬೈಕ್ ಸವಾರ ಪವನ್ ಬಳಿ ಚಾಲನಾ ಪರವಾನಿಗೆ ಇರಲಿಲ್ಲವೆನ್ನಲಾಗಿದ್ದು, ಜೊತೆಗೆ ಆತ ಹೆಲ್ಮೆಟ್ ಕೂಡಾ ಧರಿಸಿರಲಿಲ್ಲ. ಇದೀಗ ಪೊಲೀಸರು ಪವನ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...