alex Certify
ಕನ್ನಡ ದುನಿಯಾ       Mobile App
       

Kannada Duniya

ಗೇಲಿಗೊಳಗಾಯ್ತು ಮೇಯರ್ ಟ್ವೀಟ್ ಮಾಡಿದ ಫೋಟೋ

hyderabad-mayors-photoshopped-before-and-after-images-get-trolledಸಾಮಾಜಿಕ ಜಾಲತಾಣಗಳಲ್ಲಿ ಫೋಟೋಶಾಪ್ ಮಾಡಿದ ಫೇಕ್ ಫೋಟೋಗಳನ್ನು ಶೇರ್ ಮಾಡಿ ಲೈಕ್ಸ್ ಗಿಟ್ಟಿಸಿಕೊಳ್ಳಲು ಹಲವರು ಯತ್ನಿಸುತ್ತಾರೆ. ಆದರೆ ಈ ತಾಣಗಳಲ್ಲಿ ಸಕ್ರಿಯರಾಗಿರುವವರು ಕ್ಷಣಾರ್ಧದಲ್ಲಿ ಇಂತವುಗಳನ್ನು ಗುರುತಿಸಿ ಅಂತಹ ಫೋಟೋ ಹಾಕಿದವರಿಗೆ ಬೆವರಿಳಿಸುತ್ತಾರೆ. ಈಗ ಹೈದರಾಬಾದ್ ಮೇಯರ್ ಮಾಡಿರುವ ಯಡವಟ್ಟೊಂದು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನ ಮೇಯರ್ ರಾಮಮೋಹನ್ ಇತ್ತೀಚೆಗೆ ಎರಡು ಫೋಟೋಗಳನ್ನು ತಮ್ಮ ಟ್ವೀಟರ್ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಶೇರ್ ಮಾಡಿದ್ದರು. ಒಂದು ಚಿತ್ರದಲ್ಲಿ ಕಸದ ರಾಶಿ ಬಿದ್ದಿದ್ದರೆ ಮತ್ತೊಂದು ಚಿತ್ರದಲ್ಲಿ ಅದೇ ಜಾಗ ಸಂಪೂರ್ಣ ಸ್ವಚ್ಚವಾಗಿತ್ತಲ್ಲದೇ ಹಸಿರು ಕಂಗೊಳಿಸುತ್ತಿತ್ತು.

ಆದರೆ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರಿಗೆ ಇದು ಫೋಟೋಶಾಪ್ ಮಾಡಿದ ಚಿತ್ರವೆಂದು ಕ್ಷಣಮಾತ್ರದಲ್ಲೇ ಮನವರಿಕೆಯಾಗಿತ್ತು. ಯಾಕಂದರೆ ಎರಡೂ ಚಿತ್ರಗಳಲ್ಲಿ ಅದೇ ದಾರಿಹೋಕರು ಕಾಣಿಸಿಕೊಂಡಿದ್ದರು. ಕಡೆಗೆ ಮೇಯರ್ ಹಾಕಿದ ಚಿತ್ರಕ್ಕೆ ಅವರ ಟ್ವೀಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲೇ ಗೇಲಿಗಳ ಸುರಿಮಳೆಯಾಯಿತು.

ಪ್ರಮಾದದ ಅರಿವಾದ ಮೇಯರ್ ತಕ್ಷಣವೇ ಈ ಫೋಟೋವನ್ನು ಡಿಲಿಟ್ ಮಾಡಿದರಾದರೂ ಅಷ್ಟರಲ್ಲಾಗಲೇ ಅದು ವೈರಲ್ ಆಗಿತ್ತು. ಇದಕ್ಕೆಈಗ ಸ್ಪಷ್ಟನೆ ನೀಡಲಾಗಿದ್ದು, ಮೇಯರ್, ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು ಈ ಫೋಟೋ ಹಾಕಿದ್ದರು. ಮುನ್ಸಿಪಲ್ ಕಾರ್ಪೋರೇಷನ್ ಈ ರೀತಿ ಸ್ವಚ್ಚ ಮಾಡಿದೆ ಎಂದು ಹೇಳಿರಲಿಲ್ಲವೆಂದು ಸಮರ್ಥಿಸಿಕೊಳ್ಳಲಾಯಿತು. ಜನರಲ್ಲಿ ಅರಿವು ಮೂಡಿದರೆ ಕಸದಿಂದ ತುಂಬಿದ್ದ ಸ್ಥಳ ಈ ರೀತಿಯಾಗುತ್ತದೆ ಎಂಬುದನ್ನು ಹೇಳಲು ಮೇಯರ್ ಹೊರಟಿದ್ದರು ಎಂಬ ಸಮಜಾಯಿಷಿ ನೀಡಲಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...